ಹೊಸದಿಗಂತ ಆನ್ ಲೈನ್ ಡೆಸ್ಕ್:
6 ನೇ ವೇತನ ಆಯೋಗ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರು ದಿನಗಳನ್ನು ಮುಗಿಸಿದೆ. ಈ ಮಧ್ಯೆ ಬಿಎಂಟಿಸಿ ಕರ್ತವ್ಯಕ್ಕೆ ಹಾಜರಾಗದ ತರಬೇತಿ ಸಿಬ್ಬಂದಿಯನ್ನು ವಜಾ ಮಾಡುತ್ತಿದೆ.
ನಿನ್ನೆ 96 ತರಬೇತಿ ಸಿಬ್ಬಂದಿಯನ್ನು ವಜಾ ಮಾಡಿದ್ದ ಬಿಎಂಟಿಸಿ ಇಂದು ಮತ್ತೆ 60 ತರಬೇತಿ ಸಿಬ್ಬಂದಿ ಹಾಗೂ 60 ಪ್ರೊಬೇಷನರಿ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಿದೆ. ನಾಳೆಯೂ ಮುಷ್ಕರ ಮುಂದುವರಿದಲ್ಲಿ ಮತ್ತಷ್ಟು ಸಿಬ್ಬಂದಿಯನ್ನ ಬಿಎಂಟಿಸಿ ವಜಾ ಮಾಡಲಿದೆ ಎಂದು ವರದಿಯಾಗಿದೆ.