ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾರಿಗೆ ಸಂಸ್ಥೆ ಬಸ್ಸಿನ ಮೇಲೆ ಕಲ್ಲುತೂರಾಟ: ಗಾಜುಗಳು ಜಖಂ, ಸಿಬ್ಬಂದಿಯಿಂದಲೇ ಕೃತ್ಯ ಶಂಕೆ

ಹೊಸ ದಿಗಂತ ವರದಿ, ಕೋಲಾರ:

ಸಾರಿಗೆ ಸಂಸ್ಥೆ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ತಾಲ್ಲೂಕಿನ ತಂಬಿಹಳ್ಳಿ ಗೇಟ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪೊಲೀಸ್ ಭದ್ರತೆಯಲ್ಲಿಯೇ ಮುಳಬಾಗಿಲಿನಿಂದ ಕೋಲಾರಕ್ಕೆ ವಾಪಾಸ್ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಮೇಲೆ ತಂಬಿಹಳ್ಳಿ ಗೇಟ್‌ನಲ್ಲಿ ಕಲ್ಲು ತೂರಲಾಗಿದ್ದು, ಗಾಜು ಪುಡಿಯಾಗಿದೆ.
ಈ ಬಸ್ಸು ಮುಳಬಾಗಿಲು ಡಿಪೋಗೆ ಸೇರಿದ್ದಾಗಿದ್ದು, ಸಾರಿಗೆ ನೌಕರರ ಮುಷ್ಕರದ ನಡುವೆಯೂ ಕೆಲವು ಪ್ರೊಬೆಷನರಿ ನೌಕರರಿಂದ ಹಲವು ಬಸ್ಸುಗಳನ್ನು ಓಡಿಸುವ ಕಾರ್ಯವನ್ನು ಸಾರಿಗೆ ಸಂಸ್ಥೆ ಮಾಡಿತ್ತಲ್ಲದೇ ಪ್ರತಿ ಬಸ್ಸಿಗೂ ಪೊಲೀಸರ ಭದ್ರತೆ ಒದಗಿಸಲಾಗಿತ್ತು.
ಮುಂಭಾಗದ ಗಾಜಿಗೆ ಕಲ್ಲೆಸದ ಹಿನ್ನಲೆ ಗಾಜು ಪುಡಿ ಪುಡಿಯಾಗಿದ್ದು, ಮುಷ್ಕರ ನಿರತ ಸಾರಿಗೆ ಸಿಬ್ಬಂದಿಯೇ ಕಲ್ಲು ತೂರಾಟ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss