ಹೊಸದಿಗಂತ ವರದಿ,ಬಳ್ಳಾರಿ:
ಅರಣ್ಯ ಪ್ರದೇಶದಲ್ಲಿನ ಶ್ರೀಗಂಧದ ಕಟ್ಟಿಗೆಗಳನ್ನು ಸಾಗಣೆ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಸಂಡೂರು ಪೊಲೀಸ್ ರು ಯಶಸ್ವಿಯಾಗಿದ್ದಾರೆ. ಸುಶೀಲಾ ನಗರ ತಾಂಡಾದ ಇ.ಆರ್. ರಾಮ ಲೀನಾನಾಯ್ಕ್ , ಆರ್.ಮಂಜುನಾಥ್ ನಾಯ್ಕ್, ಕಿರಣ್ ನಾಯ್ಕ್ ಬಂಧಿತರು. ಶ್ರೀಗಂಧದ ಕಟ್ಟಿಗೆಗಳನ್ನು ಸಾಗಣೆ ಮಾಡುವ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ, ಡಿಎಸ್ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಡಿಸಿಆರ್ ಬಿ ಹಾಗೂ ಅವರ ನೇತೃತ್ವದ ತಂಡ ಹಾಗೂ ಸಂಡೂರು ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಂಡೂರು-ಹೊಸಪೇಟೆ ರಸ್ತೆಯ ಭಾವಿಹಳ್ಳಿ ಕ್ರಾಸ್ ಬಳಿ ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿ, ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಮೂವರನ್ನು ಬಂಧಿಸಲಾಗಿದ್ದು, ಇತರರು ಪರಾರಿಯಾಗಿದ್ದಾರೆ. 42,08,000 ರೂ. ಬೆಲೆ ಬಾಳುವ ಶ್ರೀಗಂಧದ ಕಟ್ಟಿಗೆಗಳು ಹಾಗೂ ಅವರಿಂದ ಜಪ್ತಿ ಮಾಡಿದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಡೂರು ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ದೊಡ್ಡಮಟ್ಟದ ಅಕ್ರಮ ದಂಧೆ ಹಿನ್ನೆಲೆ ವಾಹನಗಳ ಸಮೇತ ಆರೋಪಗಳನ್ನು ನಗರಕ್ಕೆ ಕರೆ ತಂದು ಎಸ್ಪಿ ಅವರ ಮುಂದೆ ಹಾಜರು ಪಡಿಸಲಾಗಿದ್ದು, ಈ ಜಾಲವನ್ನು ಬೇಧಸಿದ ಇಡೀ ತಂಡಕ್ಕೆ ಹಾಗೂ ಅಧಿಕಾರಿಗಳನ್ನು ಎಸ್ಪಿ ಸೈದಲು ಅಡಾವತ್ ಅವರು ಅಭಿನಂದಿಸಿ, ನಗದು ಬಹುಮಾನವನ್ನು ಘೋಷಿಸಿದ್ದಾರೆ.