ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಆಗಸ್ಟ್-ಸೆಪ್ಟೆಂಬರ್ನಲ್ಲಿ ಶೇ.28 ರಷ್ಟು ಭಾರತೀಯರು ಪ್ರವಾಸ ಕೈಗೊಳ್ಳುವ ಯೋಜನೆಯಲ್ಲಿದ್ದು, ಕೊರೋನಾ ಮೂರನೇ ಅಲೆ ಅಪಾಯ ಹೆಚ್ಚಾಗಿದೆ.
ಈ ಬಗ್ಗೆ ಆನ್ಲೈನ್ ಪೋರ್ಟಲ್ ಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದ್ದು, ಈಗಿನ್ನು ಕೊರೋನಾ ಎರಡನೇ ಅಲೆ ಭೀತಿಯಿಂದ ತಕ್ಕ ಮಟ್ಟಿಗೆ ಸುಧಾರಿಸಿದ್ದೇವೆ. ಆದರೆ ಭಾರತದಲ್ಲಿ ಶೇ.28 ರಷ್ಟು ಮಂದಿ ಟ್ರಾವೆಲ್ ಪ್ಲಾನ್ ಹಾಕಿಕೊಂಡಿದ್ದು, ಮೂರನೆ ಅಲೆ ನಾವೇ ಆಹ್ವಾನಿಸಿದಂತೆ ಆಗುತ್ತದೆ ಎಂದಿದೆ.
ಸಮೀಕ್ಷೆಯಲ್ಲಿ 311 ಜಿಲ್ಲೆಗಳಲ್ಲಿ ವಾಸಿಸುವ 18 ಸಾವಿರಕ್ಕೂ ಹೆಚ್ಚು ನಾಗರೀಕರು ಭಾಗವಹಿಸಿದ್ದಾರೆ.