ಭಾರೀ ಗಾಳಿ ಮಳೆಗೆ ವಾಹನದ ಮೇಲೆ ಉರುಳಿದ ಮರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾನುವಾರ ಸುರಿದ ಭಾರೀ ಗಾಳಿ ಮಳೆಯಿಂದಾಗಿ ರಾ ಹೆ 75 ರ ಉಪ್ಪಿನಂಗಡಿಯ ಇಚ್ಲಂಪಾಡಿ ಮಾಗೂ ಗುಂಡ್ಯದಲ್ಲಿ ಸಂಚರಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕೆಲ ತಾಸು ಹೆದ್ದಾರಿ ಸಂಚಾರ ತಡೆ ಹಿಡಿಯಲ್ಪಟ್ಟ ಘಟನೆ ನಡೆದಿದೆ.
ಇಚ್ಲಂಪಾಡಿ ಬಳಿಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟಿಟಿ ವಾಹನದ ಮೇಲೆ ಮರ ಬಿದ್ದು ವಾಹನ ಸಂಚಾರ ತಡೆ ಹಿಡಿಯಲ್ಪಟ್ಟಿತ್ತು. ಅದೃಷ್ಠಾವಶಾತ್ ವಾಹನದಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗದೇ ಬಚವಾಗಿದ್ದಾರೆ. ಇದರಿಂದಾಗಿ ಹೆದ್ದ್ದಾರಿಯಲ್ಲಿ ವಾಹನ ಸಂಚಾರ ತಡೆ ಹಿಡಿಯಲ್ಪಟ್ಟು ಕಿ ಮೀ ಉದ್ದಕ್ಕೂ ವಾಹನಗಳು ಸಾಲು ಸಾಲಾಗಿ ನಿಲ್ಲುವಂತಾಯಿತು.
ಇದೇ ಸಮಯಕ್ಕೆ ಗುಂಡ್ಯದ ಅನಿಲ ಎಂಬಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದಕ್ಕೆ ಹೆದ್ದಾರಿ ಬದಿಯ ಮರವೊಂದು ಬಿದ್ದು, ವಾಹನ ಸಂಚಾರಕ್ಕೆ ಅಡೆತಡೆಯುಂಟಾಯಿತು,.ಅದೃಷ್ಠಾವಶಾತ್ ಈ ಘಟನೆಯಲ್ಲಿಯೂ ಯಾವುದೇ ಜೀವ ಹಾನಿ ಸಂಭವಿಸಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!