TRENDING | ತಾಯಿ ಜೊತೆ ‘ಸಂಸ್ಕೃತ ಶ್ಲೋಕ’ ಹೇಳುವ ಪುಟ್ಟ ಮಗು: ಕಲಿಯುಗದ ಅಭಿಮನ್ಯು ಎಂದ ಜನರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುವೊಂದು ತಾಯಿ ಜೊತೆ ಸಂಸ್ಕೃತ ಶ್ಲೋಕ ಪಠಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, . ಇದನ್ನ ನೋಡಿರುವ ನೆಟ್ಟಿಗರು ಫಿದಾ ಆಗಿದ್ದು, ಇದು ಕಲಿಯುಗದ ಅಭಿಮನ್ಯು ಎಂದು ಕರೆಯುತ್ತಿದ್ದಾರೆ.
ಈ ಅದ್ಭುತ ವಿಡಿಯೋ ತುಣುಕೊಂದನ್ನು ಐಪಿಎಸ್​​ ಅಧಿಕಾರಿ ರಾಜೇಶ್​ ಹಿಂಗಾಂಕರ್​ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಗು ಸ್ಪಷ್ಟವಾಗಿ ಸಂಸ್ಕೃತ ಶ್ಲೋಕ ಉಚ್ಚರಿಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಇದನ್ನ ಕಲಿತಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಈ ವಿಡಿಯೋ ಸಾವಿರಾರು ಜನರಿಂದ ವೀಕ್ಷಣೆಗೊಳಗಾಗಿದ್ದು, ಅನೇಕ ರೀತಿಯ ಅಭಿಪ್ರಾಯ ಸಹ ಹಂಚಿಕೊಂಡಿದ್ದಾರೆ. ಕೆಲವರು ಮಗುವನ್ನ ಕಲಿಯುಗದ ಅಭಿಮನ್ಯು ಎಂದು ಕರೆದಿದ್ದಾರೆ.

ಹಿಂದು ಧರ್ಮದಲ್ಲಿ ಯಾವುದೇ ಮಗುವಿಗೆ 16 ಸಂಸ್ಕಾರಗಳನ್ನು ಪೂರ್ಣಗೊಳಿಸುವ ನಂಬಿಕೆ ಇದೆ. ಅವುಗಳಲ್ಲಿ ಒಂದು ಪುಂಸವನ ( ಸೀಮಂತ) ಸಂಸ್ಕಾರ. ಮಗುವಿನ 3 ತಿಂಗಳ ವಯಸ್ಸನ್ನು ಪೂರ್ಣಗೊಳಿಸಿದ ನಂತರ ಮಗುವಿನ ಪೋಷಕರು ಇದನ್ನು ಮಾಡುತ್ತಾರೆ. ಆರೋಗ್ಯವಂತ ಮಗುವಿನ ಪ್ರಾಪ್ತಿಗಾಗಿ ಇದನ್ನು ಮಾಡಲಾಗುತ್ತದೆ ಮತ್ತು ಮಹಿಳೆಯು ಮಗುವಿನೊಂದಿಗೆ ಮಾತನಾಡುವ ಈ ಮಂತ್ರವನ್ನು ತಾಯಿಯು ಪುಂಸವನ ಸಂಸ್ಕಾರದಲ್ಲಿ ಕೇಳುತ್ತಾಳೆ ಇದರಿಂದ ಮಗು ಅದನ್ನು ಕಲಿಯಬಹುದು ಎನ್ನುತ್ತಾರೆ.
ಈ ವೀಡಿಯೋ ನೋಡಿದ ನಂತರ ಜನರು ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ರೀಟ್ವೀಟ್ ಕೂಡ ಮಾಡುತ್ತಿದ್ದಾರೆ. ಮಹಾಭಾರತದ ಚಕ್ರವ್ಯೂಹವನ್ನು ಒಡೆಯುವ ಅಭಿಮನ್ಯುವಿನ ಕಲೆಯ ಲಿಂಕ್‌ನಂತೆ ಈ ವೀಡಿಯೊವನ್ನು ನೋಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!