TRENDING | ಮಂಗಳ ಗ್ರಹದಿಂದ ತೆಗೆದ ಭೂಮಿಯ ಚಿತ್ರಕ್ಕೆ ಫಿದಾ ಆದ ಆನಂದ್​ ಮಹೀಂದ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮಹೀಂದ್ರಾ ಗ್ರೂಪ್​ ಅಧ್ಯಕ್ಷ ಆನಂದ್​ ಮಹೀಂದ್ರಾ ಅವರು ,ಇತ್ತೀಚೆಗೆ ರಿಟ್ವೀಟ್​ ಮಾಡಿದ ಪೋಸ್ಟ್​ ಗೆ ವಿಶೇಷ ಫೋಟೋ ಜೊತೆಗೆ ಚಿಂತನಾ ಪ್ರಚೋದಕ ಶೀರ್ಷಿಕೆ ನೀಡಿದ್ದು, ಎಲ್ಲೆಡೆ ವೈರಲ್ ಆಗಿದೆ.
ಜುಲೆ 21 ರಂದು ಮಂಗಳ ಗ್ರಹದಿಂದ ತೆಗೆದ ಭೂಮಿಯ ಚಿತ್ರವನ್ನು ಆನಂದ್​ ಮಹೀಂದ್ರಾ ಹಂಚಿಕೊಂಡಿದ್ದಾರೆ. ಗ್ರೇ ಕಲರ್​ನ ವಿಸ್ತಾರವಾದ ಪ್ರದೇಶದಲ್ಲಿ ಭೂಮಿ ಸಣ್ಣ ಚುಕ್ಕೆಯಂತೆ ಗೋಚರಿಸುತ್ತದೆ. ಈ ಅದ್ಭುತ ಫೋಟೋವನ್ನು ವಾಸ್ತವವಾಗಿ ಮಂಗಳ ಗ್ರಹದಿಂದ ತೆಗೆಯಲಾಗಿದೆ. ಹೌದು, ಆ ಚಿಕ್ಕ ನಕ್ಷತ್ರದಂತಹ ಬಿಳಿ ಚುಕ್ಕೆ ನಮ್ಮ ಪ್ರೀತಿಯ ಭೂಮಿಯಾಗಿದೆ’ ಎಂದು ಎರಡು ಸಾಲನ್ನು ಬರೆದಿದ್ದಾರೆ. ‘ಈ ಫೋಟೋ ನಮಗೆ ಕಲಿಸಬೇಕಾದ ಒಂದೇ ಒಂದು ವಿಷಯವಿದ್ದರೆ, ಅದು ನಮ್ರತೆ’ ಎಂದು ಅವರು ಬರೆದಿದ್ದಾರೆ.

ಈ ಪೋಸ್ಟ್​ ನೆಟ್ಟಿಗರಿಂದ ಬಗೆಬಗೆಯ ಅಭಿಪ್ರಾಯಗಳನ್ನು ಪಡೆದುಕೊಂಡಿತು. ಒಬ್ಬರು, ಮಂಗಳ ಗ್ರಹವನ್ನು ಭವಿಷ್ಯದ ಪೀಳಿಗೆಗೆ ‘ಸೆಲ್ಫಿ ಪಾಯಿಂಟ್​’ ಎಂದೂ ಕರೆದಿದ್ದಾರೆ. ‘ಈ ಇಡೀ ವಿಶ್ವದಲ್ಲಿ ನಾವು ಕೇವಲ ಒಂದು ಸಣ್ಣ ಧೂಳಿನ ಚುಕ್ಕೆ! ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!