TRENDING | ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಒಬ್ಬರಲ್ಲ ಇಬ್ಬರಲ್ಲ 10 ಬಾಯ್‌ಫ್ರೆಂಡ್ಸ್ ಜೊತೆ ಡೇಟಿಂಗ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಶ್ಮಿತಾ ಸೇನ್ ಸದ್ಯ ಎಲ್ಲೆಡೆ ಹರಿದಾಡುತ್ತಿರುವ ಹೆಸರು . ಅದಕ್ಕೆ ಕಾರಣ ಇತ್ತೀಚೆಗೆ ಅವರ ಲವ್ ಡೇಟ್ .
ಸುಶ್ಮಿತಾ ನಂಗೆ ಮದ್ವೆ ಬೇಡ ಅಂತ ಡಿಸೈಡ್ ಮಾಡಿದ್ದರು, ಆದರೂ ಅವರೇನು ಗಂಡಸರಿಂದ ದೂರ ಉಳಿದಿರಲಿಲ್ಲ..ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಹತ್ತು ಬಾಯ್ ಫ್ರೆಂಡ್ಸ್ ಜೊತೆ ಡೇಟ್ ಮಾಡಿದ್ದಾರೆ.
ಸುಶ್ಮಿತಾ ಸೇನ್ ಚಿಕ್ಕ ವಯಸ್ಸಿನಲ್ಲೇ ವಿಶ್ವಸುಂದರಿ ಪಟ್ಟ ಪಡೆದುಕೊಂಡವ್ರು. ಭುವನ ಸುಂದರಿಯಾಗಿ ಬಾಲಿವುಡ್ ಗೆ ಎಂಟ್ರಿಕೊಡ್ತಿದ್ದ ಹಾಗೆ ಸ್ಟಾರ್ ಗಿರಿ ಕೂಡ ಸಿಕ್ಕಿತ್ತು.ಇದೇ ಟೈಂ ನಲ್ಲಿ ಸುಶ್ಮಿತಾ ಮೋಹಕ್ಕೆ ಸೆರೆ ಆಗಿದ್ದು ವಿಕ್ರಮ್ ಭಟ್ .
ಸುಶ್ಮಿತಾ ಅಭಿನಯದ ದಸ್ತಕ್ ಚಿತ್ರಕ್ಕೆ ವಿಕ್ರಮ್ ಭಟ್ ಕಥೆ ಬರೆದಿದ್ರು ಹಾಗಾಗಿ ಇಬ್ಬರ ಒಡನಾಟ ಜೋರಾಗಿತ್ತು. ಆನಂತರ ನಟ ರಣದೀಪ್ ಹೂಡ ಹಾಗೂ ಸುಶ್ಮಿತಾ ಸೇನ್ ಕೂಡ ಮೂರು ವರ್ಷಗಳ ಕಾಲ ಲೀವಿಂಗ್ ರಿಲೇಷನ್ ಶಿಪ್ ನಲ್ಲಿದ್ರು. ಅದ್ಯಾಕೋ ಏಕಾಏಕಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡರು.
ಅದಾದ ಬಳಿಕ ಉದ್ಯಮಿಗಳು ಕೂಡ ಸುಶ್ಮಿತಾ ಸೌಂದರ್ಯಕ್ಕೆ ಮನಸೋತು ಹಿಂದೆ ಬಿದ್ದಿದ್ರು. ಅದ್ರಲ್ಲಿ ಮೊದಲಿಗರು ಬಂಟಿ ಸಚ್ದೇವ್ಮ . ಇವರ ಮಧ್ಯೆ ಲವ್ವಿ ಡವ್ವಿ ಜೋರಾಗಿಯೇ ಇತ್ತು ಆದ್ರೆ ಅದು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಬಳಿಕ 2015ರಲ್ಲಿ ಮುಂಬೈ ಮೂಲದ ರಿತಿಕ್ ಭಾಸಿನ್ ಜತೆಗೂ ಸುಶ್ಮಿತಾ ಸೇನ್ ವರ್ಷಗಳ ಕಾಲ ಸುತ್ತಾಡಿದ್ರು ನಂತ್ರ ಅವರಿಗೂ ಗುಡ್ ಬಾಯ್ ಹೇಳಿದ್ರು.
ಮತ್ತೆ ಪಾಕಿಸ್ತಾನದ ಕ್ರಿಕೆಟರ್ ವಾಸಿಮ್ ಅಕ್ರಮ್ ಜೊತೆಯೂ ತಿಂಗಳುಗಳ ಕಾಲ ಸುಶ್ಮಿತಾ ಕಾಣಿಸಿಕೊಂಡ್ರು..ಆದ್ರೆ ಇವ್ರ ಸಂಬಂಧ ಬಹುಬೇಗ ಹದಗೆಟ್ಟಿತು.
ಆ ಮೇಲೆ ಹಾಟ್ ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ ಕೂಡ ಸುಶ್ಮಿತಾ ಮೋಡಿಗೆ ಮರುಳಾಗಿದ್ರು. ಸುಶ್ಮಿತಾಗೆ 10.5 ಕ್ಯಾರಟ್ನ ಡೈಮಂಡ್ ನೀಡಿ ಪ್ರೀತಿ ನಿವೇದನೆ ಮಾಡಿದ್ರಂತೆ. ಆದ್ರೆ ಈ ಸಂಬಂಧ ಅಂತ್ಯವಾಯಿತು.
ಇನ್ನು ತನಗೆ 36 ವರ್ಷವಿದ್ದಾಗ , 22 ವರ್ಷದ ಉದ್ಯಮಿ ಇಮ್ತಿಯಾಜ್ ಖತ್ರಿ ಜತೆ ಸಂಬಂಧ ಇಟ್ಟುಕೊಂಡಿದ್ದರು.

ಮತ್ತೆ ನಿರ್ದೇಶಕ ಮುದಸ್ಸರ್ ಅಜಿಜ್ ಕೂಡ ಸುಶ್ಮಿತಾ ಬಾಯ್ ಫ್ರೆಂಡ್ ಗಳಲ್ಲೊಬ್ಬರು . ಆದ್ರೆ ಮುದಸ್ಸಾರ್ ಪಾಲಕರು ಈ ವಿಚಾರದಿಂದ ಕಂಗೆಟ್ಟ ಕಾರಣ ಮುದಸ್ಸಾರ್ ಅವರೇ ಸುಶ್ಮಿತಾ ಗೆ ಕೈಕೊಟ್ಟರು. ಆ ಬಳಿಕ ಇತ್ತೀಚಿಗೆ ಬ್ರೇಕ್ ಅಪ್ ಮಾಡಿಕೊಂಡ ರೋಹ್ಮನ್ ಶಾಲ್ ಜೊತೆಗೂ ಸುಶ್ಮಿತಾ ಸುತ್ತಾಡಿದರು. ಅಂತಿಮವಾಗಿ ಅವರಿಗೂ ಕೈಕೊಟ್ಟರು.
ಇದೀಗ ಸುಶ್ಮಿತಾ ಲಲಿತ್ ಮೋದಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ.
ಲಿತ್ ಮೋದಿ ಸಾವಿರರು ಕೋಟಿ ಒಡೆಯ. 4.555ಕೋಟಿ ಆಸ್ತಿಯ ಮಾಲೀಕರಾಗಿದ್ದಾರೆ. ..ಐಪಿಎಲ್ ಎಂಬ ಕಲ್ಪನೆ ಹುಟ್ಟುಹಾಕಿದ್ದೆ ಲಲಿತ್ ಮೋದಿ, 4.555ಕೋಟಿ ಆಸ್ತಿ ಜೊತೆಗೆ ಲಂಡನ್‌ನ ಐಕಾನಿಕ್ 117, ಸ್ಲೋನ್ ಸ್ಟ್ರೀಟ್‌ನಲ್ಲಿ ಐದು ಅಂತಸ್ತಿನ ಮಹಲು ಹೊಂದಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!