TRENDING | ರಸ್ತೆಯಲ್ಲಿ ಅಡ್ಡಗಟ್ಟಿ ಕಬ್ಬು ಸಾಗಾಟ ಲಾರಿಯಿಂದ ಹಫ್ತಾ ವಸೂಲಿ ಮಾಡಿದ ಗಜಪಡೆ!!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಬ್ಬು ಲೋಡು ಹೇರಿಕೊಂಡು ಹೋಗುತ್ತಿದ್ದ ಲಾರಿಯನ್ನು ತಡೆದ ಆನೆಗಳು ಚಾಲಕನಿಂದ ಕಬ್ಬಿನ ಕಟ್ಟುಗಳನ್ನು ವಸೂಲಿ ಮಾಡಿದ ಬಳಿಕವೇ ಹೋಗಲು ಅವಕಾಶ ನೀಡಿದ ವಿಡಿಯೋವೊಂದು ಜಾಗತಿಕ ಮಟ್ಟದಲ್ಲಿ ಟ್ರೆಂಡ್ ಆಗಿದ್ದು, ಟ್ವಿಟರ್‌ನಲ್ಲಿ ೧.೬ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಏನಿದೆ ವಿಡಿಯೋದಲ್ಲಿ?

 

ಈ ವಿಡಿಯೋ ಕೆಲವೇ ಸೆಕೆಂಡ್‌ಗಳದ್ದಾಗಿದೆ. ಇಲ್ಲಿ ಕಬ್ಬಿನ ಲೋಡು ಇರುವ ಲಾರಿಯನ್ನು ಮರಿಯಾನೆ ಹಾಗೂ ಇನ್ನೊಂದು ಆನೆ ಅಡ್ಡಗಟ್ಟುತ್ತವೆ. ಚಾಲಕ ಮುಂದಕ್ಕೆ ಚಲಾಯಿಸಲು ಯತ್ನಿಸಿದರೂ ಅವುಗಳು ಅವಕಾಶ ನೀಡುವುದಿಲ್ಲ. ಬಳಿಕ ಲಾರಿಯ ಮೇಲೆ ನಿಂತಿದ್ದ ವ್ಯಕ್ತಿ ಕಬ್ಬಿನ ಕಟ್ಟುಗಳನ್ನು ಆನೆಗಳಿಗೆ ಎಸೆಯುತ್ತಾನೆ. ಇದನ್ನು ಖಚಿತಪಡಿಸಿಕೊಂಡ ಆನೆಗಳು ನಂತರ ಲಾರಿಯನ್ನು ಹೋಗಲು ಬಿಡುತ್ತವೆ!
ಎಚ್ಚರಿಕೆ ನೀಡಿದ್ದಾರೆ ಅಧಿಕಾರಿ
ಈ ವಿಡಿಯೋವನ್ನು ಹಂಚಿಕೊಂಡಿರುವ ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್, ಜೊತೆಗೆ ಎಚ್ಚರಿಕೆಯ ಮಾತುಗಳನ್ನೂ ಬರೆದುಕೊಂಡಿದ್ದಾರೆ. ಕಾಡು ಪ್ರಾಣಿಗಳಿಗೆ ಆಹಾರ ನೀಡುವುದು ಪ್ರಯೋಜನಕಾರಿಯಲ್ಲ. ಈ ಪ್ರಾಣಿಗಳು ಸತ್ಕಾರಗಳಿಗೆ ಬಹುಬೇಗನೆ ಒಗ್ಗಿಕೊಳ್ಳುತ್ತವೆ. ಇದರಿಂದಾಗಿ ಇವುಗಳು ಕಾಡುಬಿಟ್ಟು ನಾಡಿನತ್ತ ಹೆಜ್ಜೆಹಾಕಲು ನಾವೇ ಪ್ರೇರೇಪಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!