ನಮ್ಮಲೇ ಅನೇಕರಿಗೆ ಬೆಳಗ್ಗೆ ಬೇಗ ಏಳೋದು ಅಂದ್ರೆ ಅದೊಂದು ಸಾಹಸವೇ ಸರಿ ಅನ್ನುತ್ತೇವೆ. ಆದರೆ ದಿನದ ಎಲ್ಲಾ ಕೆಲಸ ಮುಗಿಸಿ ಹಾಯಾಗಿ ಕೂರಬಹುದು.. ನಿಮಗೂ ಬೆಳಗ್ಗೆ ಬೇಗ ಏಳುವ ಅಭ್ಯಾಸ ಇಲ್ಲ ಅಂದ್ರೆ ಈ ರೀತಿ ಮಾಡಿ
ಪ್ಲಾನ್ ಮಾಡಿ: ಮೊದಲ ದಿನವೇ ಬೆಳಗ್ಗೆ 4 ಗಂಟೆಗೆ ಏಳುವ ಪ್ಲಾನ್ ಬೇಡ. 15 ನಿಮಿಷ ಮುಂಚೆ ಏಳುವ ಅಭ್ಯಾಸ ಮಾಡಿ ನಂತರ ತಾನಾಗಿಯೇ ಹೊಂದಿಕೊಳ್ಳುತ್ತದೆ.
ಬೇಗ ಮಲಗಿ: ಪ್ರತಿದಿನ ರಾತ್ರಿ ಬೇಗ ಮಲಗುವುದನ್ನು ರೂಢಿಸಿಕೊಳ್ಳಿ. ಇದರಿಂದ ಬೆಳಗ್ಗೆ ನಿರಾಯಾಸವಾಗಿ ಏಳಬಹುದು.
ಅಲರಾಂ: ಒಂದೇ ಅಲರಾಂ ಗೆ ಎಚ್ಚರ ಆಗೋದು ಕಷ್ಟ ಅನ್ನುವವರು, 5 ನಿಮಿಷದ ಅಂತರದಲ್ಲಿ 4 ಅಲರಾಂ ಇಡಿ.
ಲೈಟ್ ಆನ್, ಫ್ಯಾನ್ ಆಫ್: ಏಳಬೇಕು ಎಂದರೆ ಅದಷ್ಟು ಕಂಫರ್ಟ್ ಜೋನ್ ನಿಂದ ಹೊರಬನ್ನಿ. ಲೈಟ್ ಆಫ್ ಮಾಡಿದ್ದರೆ ಖಂಡಿತ ಏಳೋಕೆ ಮನಸಾಗೋದಿಲ್ಲ. ಇನ್ನು ಫ್ಯಾನ್ ಆರಿಸಿದರೆ ಬೆವರಿಗೆ ತಾವಾಗಿಯೇ ಏಳುತ್ತೀರಿ.
ಕಡಿಮೆ ತಿನ್ನಿ: ರಾತ್ರಿ ಮಲಗುವ ಮುನ್ನ ಕಡಿಮೆ ಊಟ ಮಾಡಿ. ಮಲಗುವ ಕನಿಷ್ಠ 2 ಗಂಟೆಗಳ ಮುನ್ನ ಆಹಾರ ಸೇವಿಸಿ.
ಹಾಸಿಗೆಯಿಂದ ಹೊರ ಬನ್ನಿ: ಎಚ್ಚರ ಆದರೆ ಮರುಕ್ಷಣವೇ ಹಾಸಿಗೆಯಿಂದ ಎದ್ದು ಬನ್ನಿ. ಇದು ನಿಮಗೆ ಆಲಸ್ಯವನ್ನು ಹೋಗಲಾಡಿಸುತ್ತೆ.