ಒಂದೇ ಕೈಯ್ಯಲ್ಲಿ ಅದ್ಭುತ ಕ್ಯಾಚ್‌ ಹಿಡಿದು ನಿಬ್ಬೆರಗಾಗಿಸಿದ ಸ್ಟಬ್ಸ್..! ಆಂಗ್ಲರ ವಿರುದ್ಧ ಸರಣಿ ಗೆದ್ದ ಆಫ್ರಿಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಗ್ಲೆಂಡ್‌ನ ಏಜಿಯಾಸ್ ಬೌಲ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಂಗ್ಲರ ವಿರುದ್ಧ 90 ರನ್‌ ಗಳ ಭರ್ಜರಿ ಜಯ ದಾಖಲಿಸಿದ ಸೌತ್‌ ಆಪ್ರಿಕಾ 2-1ರಲ್ಲಿ ಟಿ20 ಸರಣಿ ಗೆದ್ದು ಸಂಭ್ರಮಾಚರಿಸಿದೆ. ಈ ಪಂದ್ಯದಲ್ಲಿ ಆಫ್ರಿಕಾ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಪಡೆದ ಅದ್ಭುತ ಕ್ಯಾಚ್‌ ಈಗ ಎಲ್ಲೆಲ್ಲೂ ಸದ್ದು ಮಾಡುತ್ತಿದ್ದು, ಇದು ಕ್ರಿಕೆಟ್‌ ಇತಿಹಾಸದ ಅದ್ಭುತ ಕ್ಯಾಚ್‌ ಗಳಲ್ಲೊಂದು ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸೌತ್‌ ಆಪ್ರಿಕಾ, ಆರಂಭಿಕ ಆಟಗಾರ ರೇಜಾ ಹೆಂಡ್ರಿಕ್ಸ್ 70 ರನ್ (50 ಎಸೆತ, 9 ಬೌಂಡರಿ) ಆದರೆ ಎಡನ್‌ ಮಾರ್ಕ್ರಾಮ್ 51 ರನ್( 36 ಎಸೆತ, 5 ಬೌಂಡರಿ) ಭರ್ಜರಿ ಬ್ಯಾಟಿಂಗ್‌ ಬಲದಿಂದ ನಿಗದಿತ 20 ಓವರ್‌ ಗಳಲ್ಲಿ 191 ರನ್‌ ಗಳ ಬೃಹತ್‌  ಮೊತ್ತವನ್ನು ಕಲೆಹಾಕಿತು.
ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಅಗ್ರಕ್ರಮಾಂಕದ ಬ್ಯಾಟ್ಸ್‌ ಮನ್‌ ಗಳು ಉತ್ತಮ ಪ್ರದರ್ಶನ ನೀಡುವಲ್ಲಿ  ವಿಫಲರಾದರು. ಜೇಸನ್‌ ರಾಯ್‌, ಬಟ್ಲರ್‌, ಮಲಾನ್‌ ಕಡಿಮೆ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದ್ದರಿಂದ ಇಂಗ್ಲೆಂಡ್ ಒಂದು ಹಂತದಲ್ಲಿ 59/4 ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಕ್ರೀಸ್‌ ಗೆ ಇಳಿದ ಮೊಯಿಲ್‌ ಅಲಿ ಮೇಲೆ ಇಂಗ್ಲಿಷ್‌ ಅಭಿಮಾನಿಗಳು ವಿಶ್ವಾಸ ಇರಿಸಿಕೊಂಡಿದ್ದರು. ಮೋಯಿನ್‌ ಕಳೆದ ಪಂದ್ಯದಲ್ಲಿ ಕೇವಲ 16 ಎಸೆತದಲ್ಲಿ 52 ರನ್‌ ಸಿಡಿಸಿ ಅಬ್ಬರಿಸಿದ್ದರು. ಅಲಿ 5 ಎಸೆತಗಳಲ್ಲಿ  3 ರನ್ ಗಳಿಸಿದ್ದಾಗ ಮಾಕ್ರಮ್‌ ಎಸೆತದಲ್ಲಿ ಆಫ್ರಿಕಾದ ಯುವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಅದ್ಭುತ ಕ್ಯಾಚ್ ಪಡೆದರು. ಮೈದಾನದಲ್ಲಿ ಕುಳಿತಿದ್ದ ಪ್ರೇಕ್ಷಕರು  ಸ್ಟಬ್‌ನ ಕ್ಯಾಚ್ ನೋಡಿ ಒಂದು ಕ್ಷಣ ಸ್ತಂಭೀಭೂತರಾದರು. ಎಕ್ಸ್ಟಾ ಕವರ್ ಕವರ್‌ ಕ್ಷೇತ್ರದಿಂದ ಮಿಡ್ ಆಫ್ ಕಡೆಗೆ ಓಡಿ ಚಿರತೆಯಂತೆ ಹಿಂದಕ್ಕೆ ಜಿಗಿದು ಸ್ಟಬ್ಸ್ ಲೆಫ್ಟ್‌ ಹ್ಯಾಂಡ್ ನಲ್ಲಿ ಪಡೆದ ಕ್ಯಾಚ್ ಪಡೆಯಲು ನಂಬಲಸಾಧ್ಯವಾಗಿತ್ತು.

ಸ್ಟಂಬ್‌ ಈ ಹಿಂದೆ ಐಪಿಎಲ್‌ ನಲ್ಲಿ ಆರ್ಸಿಬಿ ಪರ ಎಬಿಡಿ ಹಿಡಿದ ಸೂಪರ್‌ ಮ್ಯಾನ್‌ ಕ್ಯಾಚ್‌ ಅನ್ನು ನೆನಪಿಸಿದ್ದಾರೆ. ಹರಿಣಗಳ ನಾಡಿನಲ್ಲಿ ಮತ್ತೊಬ್ಬ ಶ್ರೇಷ್ಠ ಫೀಲ್ಡರ್‌ ಹುಟ್ಟಿಕೊಂಡಿದ್ದಾನೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಳೆ ಸುರಿಸಿದ್ದಾರೆ.
ರಿಸ್ಟ್ ಸ್ಪಿನ್ನರ್ ತಬ್ರೈಜ್ ಶಮ್ಸಿ ದಾಳಿಗೆ ನಿರುತ್ತರವಾದ ಇಂಗ್ಲೆಂಡ್ ಕೇವಲ 101 ರನ್‌ಗಳಿಗೆ ಆಲೌಟ್ ಆಗಿ ಸರಣಿ ಸೋಲಿನ ಮುಖಭಂಗಕ್ಕೆ ಒಳಗಾಯಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಪ್ರೋಟೀಸ್ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ. ನಾಲ್ಕು ಓವರ್‌ಗಳಲ್ಲಿ 24 ರನ್‌ ಗೆ 5 ವಿಕೆಟ್ ಕಬಳಿಸಿದ ತಬ್ರೈಜ್ ಶಮ್ಸಿ ಪಂದ್ಯಶ್ರೇಷ್ಠರಾದರು. ಕೇಶವ್ ಮಹಾರಾಜ್ ಎರಡು ವಿಕೆಟ್‌ಗಳನ್ನು ಪಡೆದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!