ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಪತಾ ಲೇಡೀಸ್ ಸಿನಿಮಾ ಜನರ ಮನಸ್ಸನ್ನು ಗೆದ್ದ ಸಿನಿಮಾ. ಈ ಸಿನಿಮಾ ಅರೇಬಿಕ್ ಸಿನಿಮಾದ ಕಾಪಿ ಎಂದು ಹೇಳಲಾಗಿದೆ. 2025ರ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಅಧಿಕೃತ ಪ್ರವೇಶ ಪಡೆದಿತ್ತು.
ಲಾಪತಾ ಲೇಡಿಸ್’ ಸಿನಿಮಾ ‘ಬುರ್ಕಾ ಸಿಟಿ’ಯನ್ನು ಕಾಪಿ ಮಾಡಿದ ಆರೋಪಗಳನ್ನು ಎದುರಿಸುತ್ತಿದೆ. ಈ ಸಿನಿಮಾದ ಮೂಲ ಐಡಿಯಾವನ್ನು 2019ರ ಫ್ರೆಂಚ್-ಅರೇಬಿಕ್ ಕಿರುಚಿತ್ರ ಬುರ್ಕಾ ಸಿಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ನೆಟ್ಟಿಗರು ದೂರುತ್ತಿದ್ದಾರೆ.
ಈ ಕಿರುಚಿತ್ರವನ್ನು, ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ ಆಕಸ್ಮಿಕವಾಗಿ ಬುರ್ಕಾ ಧರಿಸಿದ ಮಹಿಳೆಯೋರ್ವರನ್ನು ಮನೆಗೆ ಕರೆತರುವ ವ್ಯಕ್ತಿಯ ಸುತ್ತ ಹೆಣೆಯಲಾಗಿದೆ. ರವಿ ಕಿಶನ್ ಪಾತ್ರ ಎದ್ದು ಕಾಣುವ ಲಾಪತಾ ಲೇಡೀಸ್ ಚಿತ್ರದ ಪೊಲೀಸ್ ಠಾಣೆಯ ದೃಶ್ಯ ಬುರ್ಕಾ ಸಿಟಿಯಲ್ಲಿನ ದೃಶ್ಯದಿಂದ ಪ್ರೇರಿತವಾಗಿದೆ ಎಂದು ಆರೋಪಿಸಲಾಗಿದೆ.
ಪಿತೃಪ್ರಭುತ್ವ, ಸಾಮಾಜಿಕ ಒತ್ತಡ ಮತ್ತು ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರ ಪಾತ್ರಗಳಂತಹ ಸಾಮಾನ್ಯ ವಿಷಯಗಳು ಎರಡೂ ಚಿತ್ರಗಳಲ್ಲಿವೆ. ಹಾಗಾಗಿ, ಇದು ‘ಬುರ್ಕಾ ಸಿಟಿ’ಯ ದೃಶ್ಯ ಎಂದು ಹೇಳಲಾಗುತ್ತಿದೆ.
ಕಾಪಿ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದರೆ, ಇವು ಸಾಮಾನ್ಯ ವಿಷಯಗಳು, ಹಲವು ಚಿತ್ರಗಳಲ್ಲಿವೆ ಎಂದು ಹಲವರು ವಾದಿಸಿದ್ದಾರೆ. ರಾಂಗ್ ಐಡೆಂಟಿಟಿ ಮತ್ತು ವಧುವಿನ ವಿನಿಮಯದಂತಹ ವಿಷಯಗಳು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ ಪ್ರಚಲಿತವಾಗಿವೆ ಎಂದು ಹಲವರು ಸಮರ್ಥನೆ ನೀಡಿದ್ದಾರೆ.
Laapata ladies story and scenes were copied?
And this was sent for the Oscars entry? pic.twitter.com/nWdtyTYx6g— Keh Ke Peheno (@coolfunnytshirt) April 1, 2025