Saturday, August 13, 2022

Latest Posts

ಟ್ರಕ್​ ಚಾಲನೆ ವೇಳೆ ಹೆಲ್ಮೆಟ್​ ಧರಿಸಿಲ್ಲ ಎಂದು ಚಾಲಕನಿಗೆ ಹಾಕಿದ್ರು 1,000 ರೂ. ದಂಡ!! ಎಲ್ಲಿ ಗೊತ್ತಾ?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಟ್ರಕ್​ ಚಾಲಕ ವಾಹನ ಚಲಾಯಿಸುವ ಸಂದರ್ಭದಲ್ಲಿ ಹೆಲ್ಮೆಟ್​ ಧರಿಸಿಲ್ಲ ಎಂಬ ಕಾರಣಕ್ಕೆ ಆತನಿಗೆ 1 ಸಾವಿರ ರೂ ದಂಡ ಹಾಕಲಾಗಿದೆ. ಈ ಸುದ್ದಿ ಕೇಳಿದರೆ ನಿಮಗೆ ಇಂದೆಥ ವಿಚಿತ್ರ ಅನಿಸಬಹುದು. ನಂಬುವುದೂ ಅಸಾಧ್ಯವಾಗಬಹುದು.

ಟ್ರಕ್ ಚಾಲಕನಾಗಿರುವ ಪ್ರಮೋದ್ ಕುಮಾರ್ ವಾಹನದ ಪರ್ಮಿಟ್ ಮರುನವೀಕರಣಕ್ಕೆ ಗಂಜಂ ಆರ್​ಟಿಒ ಕಚೇರಿಗೆ ಹೋಗಿದ್ದರು. ಆದರೆ ಅಲ್ಲಿರುವ ಅಧಿಕಾರಿಗಳು ನಿಮ್ಮ ಪರ್ಮಿಟ್​ ನವೀಕರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ  1 ಸಾವಿರ ರೂ. ದಂಡ ಕಟ್ಟದಿರುವುದು ತಿಳಿದಿದೆ. ಇದಕ್ಕೆ ಕಾರಣ ಕೇಳಿದಾಗ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿರುವ ಪ್ರಕರಣ ದಾಖಲಾಗಿರುವುದು ತಿಳಿದಿದೆ.

ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವರಿಕೆ ಮಾಡಲು ಪ್ರಯತ್ನಿಸಿದೂ ಪ್ರಯೋಜನವಾಗದ ಕಾರಣ  ಕೊನೆಗೆ ಬೇರೆ ದಾರಿ ಕಾಣದೇ ಪ್ರಮೋದ್ ದಂಡ ಪಾವತಿಸಿ ಪರವಾನಗಿ ನವೀಕರಣದ ಪತ್ರವನ್ನು ಪಡೆದುಕೊಂಡಿದ್ದಾರೆ.

ನಂತರ ಮಾಧ್ಯಮಗಳ ಎದುರು ಆಕ್ರೋಶ ಹೊರಹಾಕಿರುವ ಪ್ರಮೋದ್​, ಹೆಲ್ಮೆಟ್ ಹಾಕಿಕೊಂಡೆ ಟ್ರಕ್ ಚಲಾಯಿಸುವ ಕಾನೂನು ಜಾರಿಗೆ ತಂದರೆ ಅದೇ ರೀತಿ ಮಾಡುತ್ತೇನೆ. ಅದರೆ, ದುರುದ್ದೇಶಪೂರ್ವಕವಾಗಿ ಲಂಚ ಕೀಳಲು ಈ ರೀತಿಯ ಇಲ್ಲಸಲ್ಲದ ಆರೋಪ ಮಾಡುವುದು ಯಾವ ನ್ಯಾಯ. ಸರ್ಕಾರ ಇಂತಹ ಲಂಚಬಾಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು  ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss