ದಕ್ಷಿಣಕೊರಿಯಾದಲ್ಲಿ ಟ್ರಕ್‌ ಯೂನಿಯನ್‌ ಮುಷ್ಕರ : ಉತ್ಪಾದನೆ, ಸರಕುಸಾಗಣೆಗೆ ಅಡ್ಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂಧನ ವೆಚ್ಚದಲ್ಲಿ ತೀವ್ರ ಏರಿಕೆ, ಉತ್ಪಾದನೆಯನ್ನು ಅಡ್ಡಿಪಡಿಸುವುದು, ಬಂದರುಗಳಲ್ಲಿ ಚಟುವಟಿಕೆಗಳನ್ನು ನಿಧಾನಗೊಳಿಸುವುದನ್ನು ವಿರೋಧಿಸಿ ದಕ್ಷಿಣಕೊರಿಯಾದಲ್ಲಿ ಸಾವಿರಾರು ಟ್ರಕ್‌ ಗಳು ಸತತ ಮೂರನೇ ದಿನವೂ ಪ್ರತಿಭಟನೆ ನಡೆಸಿದೆ.

ಹೊಸ ಅಧ್ಯಕ್ಷ ಯುನ್ ಸುಕ್-ಯೋಲ್ ಅವರ ನೂತನ ಆರ್ಥಿಕ ನೀತಿಯನ್ನು ವಿರೋಧಿಸಿ ಕಾರ್ಗೋ ಟ್ರಕರ್ಸ್ ಸಾಲಿಡಾರಿಟಿ ಯೂನಿಯನ್ ನ 7,200ಮಂದಿ ಅಂದರೆ ಸರಿಸುಮಾರು 30 ಪ್ರತಿಶತದಷ್ಟು ಸದಸ್ಯರು ಮುಷ್ಕರದಲ್ಲಿ ತೊಡಗಿದ್ದಾರೆ. ಇವರೊಂದಿಗೆ ಒಕ್ಕೂಟದಿಂದ ಹೊರಗಿರುವ ಕೆಲವು ಟ್ರಕ್‌ ಮಾಲೀಕರೂ ಸೇರಿಕೊಂಡಿರುವುದಾಗಿ ದಕ್ಷಿಣ ಕೊರಿಯಾದ ಸಾರಿಗೆ ಸಚಿವಾಲಯ ತಿಳಿಸಿದೆ.

ಇದರಿಂದ ಸರಕು ಸಾಗಣೆ ವಿಭಾಗವು ಭಾರೀ ತೊಂದರೆಗೆ ಸಿಲುಕಿದ್ದು ಉಕ್ಕು ತಯಾರಕ ಪೋಸ್ಕೋ ಕಂಪನಿಗೆ ದೈನಂದಿನ ಸಾಗಣೆಯ ಮೂರನೆ ಒಂದು ಭಾಗದಷ್ಟು ಅಂದರೆ ಸುಮಾರು 35,000 ಟನ್ ಉಕ್ಕಿನ ಉತ್ಪನ್ನಗಳನ್ನು ಸಾಗಿಸಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದೆ. ಅಲ್ಲದೇ ಆಟೋ ಉದ್ಯಮವೂ ಕೂಡ ತೊಂದರೆಗೊಳಗಾಗಿದ್ದು ಮುಷ್ಕರವನ್ನು ವಿರೋಧಿಸಿದೆ ಹಾಗೂ ಮುಷ್ಕರವು ಜಾಗತಿಕ ಚಿಪ್ ಈಗಾಗಲೇ ತೊಂದರೆಗೊಳಗಾಗಿರುವ ಆಟೋ ಉದ್ಯಮದ ಮೇಲೆ ಮತ್ತಷ್ಟು ಋಣಾತ್ಮಕ ಪರಿಣಾಮ ಬೀರುತ್ತದೆ ಎಂದಿದೆ.

ಸಾಗಾಟದ ಕೊರತೆಯಿಂದಾಗಿ ಉಲ್ಸಾನ್‌ನಲ್ಲಿರುವ ಹ್ಯುಂಡೈ ಮೋಟಾರ್ ಸ್ಥಾವರಗಳಲ್ಲಿ ಉತ್ಪಾದನೆಯು ಹಿನ್ನಡೆ ಅನುಭವಿಸಿದೆ ಎನ್ನಲಾಗಿದೆ. ಅಲ್ಲದೇ ಉಕ್ಕು ಮತ್ತು ಸಿಮೆಂಟ್ ಸೇರಿದಂತೆ ಕೆಲವು ಉತ್ಪನ್ನಗಳ ಸಾಗಣೆಯಲ್ಲಿ ಕುಸಿತ ಕಂಡುಬಂದಿದೆ ಎಂಬುದನ್ನು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿರುವ ಕುರಿತು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!