ಕೆನಡಾದಲ್ಲಿ ಭುಗಿಲೆದ್ದ ಟ್ರಕ್ಕರ್‌ಗಳ ಪ್ರತಿಭಟನೆ : ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಪ್ರಧಾನಿ ಟ್ರುಡೊ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆನಡಾದಲ್ಲಿ ಟ್ರಕ್ಕರ್‌ಗಳ ಪ್ರತಿಭಟನೆ ತಾರಕಕ್ಕೇರಿದ್ದು, ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದಾರೆ.

ಪ್ರಧಾನಿ ಜಸ್ಟಿನ್ ಟ್ರುಡೊ, ಕೋವಿಡ್ ಆರೋಗ್ಯ ನಿಯಮಗಳ ವಿರುದ್ಧ ಟ್ರಕ್ಕರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಕೊನೆಗೊಳಿಸಲು ಅಪರೂಪವಾಗಿ ಬಳಸುವ ತುರ್ತು ಅಧಿಕಾರವನ್ನು ಜಾರಿ ಮಾಡಿದ್ದಾರೆ.

ಅಮೆರಿಕ ಗಡಿ ದಾಟುತ್ತಿದ್ದ 11  ಮಂದಿಯನ್ನು ಬಂದೂಕುಗಳ ಸಂಗ್ರಹದ ಜತೆ ಪೊಲೀಸರು ಬಂಧಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆನಡಾದ ಇತಿಹಾಸದಲ್ಲಿ ಎರಡನೇ ಬಾರಿಗೆ ಶಾಂತಿ ಸಮಯದಲ್ಲಿ ತುರ್ತು ಅಧಿಕಾರ ಬಳಸಲಾಗುತ್ತಿದೆ.

ಈ ಹಂತದಲ್ಲಿ ದಿಗ್ಭಂಧನಗಳನ್ನು ತೆರವುಗೊಳಿಸಲು ಹಾಗೂ ಪ್ರತಿಭಟನಾಕಾರರನ್ನು ಬಂಧಿಸಲು, ಟ್ರಕ್‌ಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ಸಮಯಕ್ಕೆ ಮಿಲಿಟರಿ ನಿಯೋಜನೆ ಸಾಧ್ಯವಿಲ್ಲ ಎಂದು ಟ್ರುಡೊ ಹೇಳಿದ್ದಾರೆ.

ದೇಶದಲ್ಲಿ ಹಿಂಸಾಚಾರದ ಬೆದರಿಕೆ ಮುಂದುವರಿದಿದ್ದು, ಕೌಟ್ಸ್, ಆಲ್ಬರ್ಟಾ ಮತ್ತು ಮೊಂಟಾನಾದ ಸ್ವೀಟ್ ಗ್ರಾಸ್ ಗಡಿಯಲ್ಲಿ ರೈಫಲ್‌ಗಳು, ಬಂದೂಕುಗಳು, ರಕ್ಷಾಕವಚಗಳು ಮತ್ತು ಮದ್ದುಗುಂಡುಗಳನ್ನು ಹೊಂದಿದ್ದ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಗಡಿ ದಾಟಲು ಕೋವಿಡ್ ಲಸಿಕೆ ಕಡ್ಡಾಯ ಎಂದು ಕೆನಡಾ ಸರ್ಕಾರ ಘೋಷಿಸಿದ್ದು, ಇದರ ವಿರುದ್ಧ ಕೆನಡಾದ ಟ್ರಕ್ ಮಾಲೀಕರು ಪ್ರತಿಭಟನೆ ಆರಂಭಿಸಿದ್ದರು. ಕೆಲವೇ ದಿನಗಳಲ್ಲಿ ಪ್ರತಿಭಟನೆ ಗಂಭೀರ ರೂಪ ಪಡೆದುಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!