ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಮೇಲೆ ಯಾವುದೇ ವೈಮಾನಿಕ ದಾಳಿ ನಡೆಸದಂತೆ ಇಸ್ರೇಲ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ TRUTH ಮೂಲಕ ಇಸ್ರೇಲ್‌ಗೆ ಕಠಿಣ ಎಚ್ಚರಿಕೆ ನೀಡಿದ ಅವರು, ಅಂತಹ ಕೃತ್ಯವನ್ನು ಕದನವಿರಾಮದ “ಪ್ರಮುಖ ಉಲ್ಲಂಘನೆ” ಎಂದು ಕರೆದಿದ್ದಾರೆ.
“ನೀವು ಹಾಗೆ ಮಾಡಿದರೆ, ಅದು ಪ್ರಮುಖ ಉಲ್ಲಂಘನೆಯಾಗಲಿದೆ. ನಿಮ್ಮ ಪೈಲಟ್‌ಗಳನ್ನು ಈಗಲೇ ವಾಪಾಸ್ ಕರೆತನ್ನಿ” ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ಪ್ರತೀಕಾರದ ಪ್ರತಿಜ್ಞೆ ಮಾಡಿತ್ತು. ಆದರೆ, ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರು ಭರವಸೆ ನೀಡಿದ್ದಾರೆ.
ನಿನ್ನೆ ತಡರಾತ್ರಿ ಎರಡೂ ದೇಶಗಳಿಗೆ ಯುದ್ಧವನ್ನು ನಿಲ್ಲಿಸಲು ಗಡುವು ನೀಡಿದ ನಂತರ ಇಸ್ರೇಲ್ ಮತ್ತು ಇರಾನ್ ಎರಡೂ ದಾಳಿಗಳೊಂದಿಗೆ ಕದನ ವಿರಾಮ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಹೇಗ್‌ನಲ್ಲಿ ನ್ಯಾಟೋ ಶೃಂಗಸಭೆಗೆ ಹೊರಡುವ ಮೊದಲು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇಸ್ರೇಲ್ ಮತ್ತು ಇರಾನ್ ನಡುವೆ ಮುಂದುವರಿದ ದಾಳಿಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. “ಇರಾನ್ ಕದನವಿರಾಮ ಉಲ್ಲಂಘಿಸಿದರು, ಆದರೆ ಇಸ್ರೇಲ್ ಕೂಡ ನಿಯಮವನ್ನು ಉಲ್ಲಂಘಿಸಿದೆ. ನಾನು ಇಸ್ರೇಲ್ ಬಗ್ಗೆ ಸಂತೋಷವಾಗಿಲ್ಲ ಎಂದಿದ್ದಾರೆ.