ತುಳಸಿಯನ್ನು ಔಷಧಿಯಾಗಿ ಪರಿಗಣಿಸಲಾಗಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುತ್ತದೆ. ಇಂತಹ ಕೆಲ ಪ್ರಯೋಜನಗಳನ್ನು ತಿಳಿಯಿರಿ
ಒತ್ತಡ ನಿವಾರಣೆ: ತುಳಸಿ ಸೇವಿಸುವುದರಿಂದ ನಮ್ಮಲ್ಲಿನ ಒತ್ತಡ ನಿವಾರಣೆಗೊಳಿಸುತ್ತದೆ. ಇದರ ಜೊತೆಗೆ ರಕ್ತ ಸಂಚಲನ ಹೆಚ್ಚಾಗುತ್ತದೆ.
ಜೀರ್ಣಕ್ರಿಯೆ: ಪ್ರತಿನಿತ್ಯ ತುಳಸಿ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅಗತ್ಯವಿರುವ ಪಿಹೆಚ್ ಲೆವೆಲ್ ಗಳನ್ನು ಸುಧಾರಿಸುತ್ತದೆ.
ಮಲಬದ್ಧತೆ: ತುಳಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಗ್ಗಿಸುತ್ತದೆ.
ನೆಗಡಿ, ಕೆಮ್ಮು: ತುಳಸಿಯಲ್ಲಿನ ಆಂಟಿ ಮೈಕ್ರಬಿಯಲ್ ಅಂಶಗಳಿದ್ದು, ಇದರ ಸೇವನೆಯಿಂದ ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಉಸಿರಾಟ: ಆಂಟಿ ಬ್ಯಾಕ್ಟೀರಿಯಲ್ ಅಂಶಗಳಿಂದ ದುರ್ವಾಸನೆಯ ಉಸಿರಾಟ ಕಡಿಮೆ ಮಾಡುತ್ತದೆ.
ತ್ವಚೆ: ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಟಾಕ್ಸಿನ್ ನಿಯಂತ್ರಿಸುತ್ತದೆ. ಇದರಿಂದ ತ್ವಚೆಯ ಮೇಲಿನ ಮೊಡವೆಗಳು, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್: ಇದರ ಸೇವನೆಯಿಂದ ಕಾರ್ಕಿನೋಜೆನಿಕ್ ಅಂಶದಿಂದ ದೇಹದಲ್ಲಿ ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳಿಂದ ಪಾರು ಮಾಡುತ್ತದೆ.