ನೀವು ಪ್ರೊಫೆಷನಲ್ ಫೋಟೋಗ್ರಾಫರ್ ಆಗುವ ಆಸೆ ಇದ್ಯಾ? ಅಥವಾ ನಿಮ್ಮ ಫೋಟೋಗಳನ್ನು ನೀವೇ ಎಡಿಟ್ ಮಾಡೋದನ್ನ ಕಲಿಯಬೇಕೆಂಬ ಬಯಕೆ ನೀವು ಫೋಟೋ ತೆಗೆಯುವ ಬೇಸಿಕ್ ಕಲೆ ಕಲೆಯಬೇಕು.. ನಂತರ ಆ ಫೋಟೋಗಳಿಗೆ ಸಖತ್ ಲುಕ್ ಕೊಡೋದೆ ಎಡಿಟಿಂಗ್.. ಅದಕ್ಕೆ ಈ ಟಿಪ್ಸ್ ಫಾಲೋ ಮಾಡಿ..
ಕ್ಲಿಯರ್ ಫೋಟೋ: ನೀವು ಎಡಿಟ್ ಮಾಡೋಕೆ ಆಯ್ಕೆ ಮಾಡುವ ಫೋಟೋಗಳು ಆದಷ್ಟು ಕ್ಲಿಯರ್ ಆಗಿರಲಿ. ಇದರಿಂದ ಫೋಟೋ ಎಡಿಟ್ ಮಾಡುವುದಕ್ಕೆ ಸಹಾಯವಾಗುತ್ತದೆ.
ಲೈಟಿಂಗ್ ಗಮನಿಸಿ: ಫೊಟೋ ಎಡಿಟ್ ಮಾಡುವಾಗ ಅದರಲ್ಲಿನ ಕಪ್ಪು ಹಾಗೂ ಬೆಳಕಿನ ಜಾಗಗಳನ್ನು ಸರಿ ಮಾಡೋದಕ್ಕೆ ಗಮನಕೊಡಿ. ಇದರಿಂದ ಕಾಂಟ್ರೆಸ್ಟ್ ಆಗಿರುವ ಫೋಟೋಗಳು ಸರಿಯಾಗಿ ಮೂಡಿಬರುತ್ತದೆ.
ಅಟೋ ಬ್ರೈಟ್ ನೆಸ್: ಫೋಟೋಗಳಲ್ಲಿ ಬೆಳಕು ಜಾಸ್ತಿ, ಕಡಿಮೆಯಾದಾಗ ಮೊದಲು ಆಟೋ ಎಡಿಟ್ ಆಯ್ಕೆ ಮಾಡಿಕೊಳ್ಳಿ. ಅದು ಬೇಸಿಕ್ ಲೈಟ್ ಬ್ಯಾಲೆನ್ಸ್ ಮಾಡುತ್ತದೆ. ಇದರಿಂದ ನೀವು ಮುಂದಿನ ಹಂತದಲ್ಲಿ ಎಡಿಟ್ ಮಾಡೋಕೆ ಸಹಾಯವಾಗುತ್ತದೆ.
ಮೊಬೈಲ್ ನ ಬೇಸಿಕ್ ಎಡಿಟ್ ಆಪ್ಷನ್: ಯಾವುದಾದರೂ ಆಪ್ ನಲ್ಲಿ ಎಡಿಟ್ ಮಾಡಿವ ಬದಲಿಗೆ ಮೊಬೈಲ್ ನಲ್ಲೇ ಇರುವ ಫೋಟೋ ಎಡಿಟ್ ಆಪ್ಷನ್ ಅಲ್ಲೇ ವಿವಿಧ ರೀತಿಯ ಎಫೆಕ್ಟ್ ಗಳನ್ನು ಕೊಡಬಹುದು.
ಎಡಿಟಿಂಗ್ ಆಪ್: ಫೋಟೋ ಎಡಿಟ್ ಮಾಡುವುದಕ್ಕೆ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಆಪ್ ಗಳು ಸಿಗುತ್ತವೆ.. ಅವುಗಳಲ್ಲಿ ದಿ ಬೆಸ್ಟ್ ಆಪ್ ಡೌನ್ ಲೋಡ್ ಮಾಡಿಕೊಳ್ಳೋದು ಒಳ್ಳೇದು.. ವಿಎಸ್ ಸಿಒ, ಸ್ನಾಪ್ ಸೀಡ್, ಅಡೋಬ್, ಲೈಟ್ ರೂಮ್, ಫೋಟೋಶಾಪ್ ಎಕ್ಸ್ ಪ್ರೆಸ್ ಆಪ್ ಗಳನ್ನು ಬಳಸಬಹುದು.
ಜಾಸ್ತಿ ಎಫೆಕ್ಟ್ ಬೇಡ: ಯಾವುದೇ ಫೋಟೋಗಾದರೂ ಜಾಸ್ತಿ ಎಫೆಕ್ಟ್ ಕೊಡಬೇಡಿ. ಇದರಿಂದ ಫೋಟೋ ಕ್ವಾಲಿಟಿ ಹಾಳಾಗುತ್ತದೆ.