ಎಲ್ಲಾ ಡ್ರೈ ಫ್ರೂಟ್ಸ್ ಗಳೊಂದಿಗೆ ರೈಸ್ ಬಾತ್ ಮಾಡೋದು ಹೇಗೆ ಅಂತ ನಿಮಗೆ ಗೊತ್ತ?
ಬೇಕಾಗುವ ಸಾಮಗ್ರಿಗಳು: 2 ಕಪ್ ಅಕ್ಕಿ, 10 ಬಾದಾಮಿ, 10 ಗೋಡಂಬಿ, 10 ಒಣದ್ರಾಕ್ಷಿ, 2 ಚಮಚ ತುಪ್ಪ, ದಾಲ್ಚಿನ್ನಿ ಎಲೆ, ಕಾಳುಮೆಣಸು, ಚಕ್ಕೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಬಾಣಲೆಗೆ ತುಪ್ಪ ಹಾಕಿ ದಾಲ್ಚಿನ್ನಿ ಎಲೆ, ಕಾಳು ಮೆಣಸು, ಬಾದಾಮಿ, ಗೋಡಂಬಿ, ದ್ರಾಕ್ಷಿ,ಚಕ್ಕೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ನಂತರ ಅಕ್ಕಿ ಹಾಕಿ ಹುರಿಯಿರಿ. ನಂತರ ಉಪ್ಪು ಮತ್ತು ನೀರನ್ನು ಸೇರಿಸಿ, ಕಡಿಮೆ ಉರಿಯಲ್ಲಿ ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ. ಅನ್ನ ಉದುರು ಉದುರಾಗುವವರೆಗೂ ಬೇಯಿಸಿ. ಇದು ಸಿದ್ಧವಾದ ನಂತರ, ನೀವು ಸೌತೆಕಾಯಿ ರೈತಾದೊಂದಿಗೆ ಬಡಿಸಬಹುದು.