KITCHEN| ಹೊಟೇಲ್‌ ಸ್ಟೈಲ್‌ ಟೀ ಹೀಗೆ ಮಾಡಿ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀಯನ್ನು ಹಲವು ರೀತಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಬಿಸ್ಕತ್ತು ಬಳಸಿ ಕ್ರೀಮ್‌ ಟೇಸ್ಟ್‌ ನಲ್ಲಿ ಹೋಟೆಲ್‌ ಸ್ಟೈಲ್‌ನ ಟೀ ಮಾಡೋದನ್ನು ಹೇಳ್ತೀವಿ.

ಬೇಕಾಗುವ ಸಾಮಾಗ್ರಿ: 1 ಕಪ್ ಹಾಲು, 1 ಕಪ್ ನೀರು, 2 ಟೀಸ್ಪೂನ್ ಸಕ್ಕರೆ, 1 – 2 ಟೀಸ್ಪೂನ್ ಟೀ ಪೌಡರ್, 2 ಮಾರಿ ಬಿಸ್ಕತ್ತು

ಹೀಗೆ ಮಾಡಿ: ಒಂದು ಪಾತ್ರೆಯಲ್ಲಿ ಹಾಲು ತೆಗೆದುಕೊಂಡು ಅದಕ್ಕೆ ನೀರು, ಸಕ್ಕರೆ, ಟೀ ಪೌಡರ್ ಸೇರಿಸಿ ಕುದಿಯಲು ಇಡಿ.

ಇತ್ತ ಬಿಸ್ಕತ್ತನ್ನು ಮಿಕ್ಸಿಯಲ್ಲಿ ಪುಡಿಮಾಡಿ. 1 – 2 ಸ್ಪೂನ್ ಬಿಸ್ಕತ್ತು ಪುಡಿಯನ್ನು ಕುದಿಯಲು ಇಟ್ಟ ಟೀ ಗೆ ಸೇರಿಸಿ. ಚೆನ್ನಾಗಿ ಮಗುಚಿ 2 ನಿಮಿಷ ಚೆನ್ನಾಗಿ ಕುದಿಸಿ. ಬಳಿಕ ಸ್ಟವ್ ಆಫ್ ಮಾಡಿ. ಟೀ ಯನ್ನು ಸೋಸಿ, ಚೆನ್ನಾಗಿ ಎತ್ತಿ ಹಾಕಿ, ಕುಡಿಯಲು ನೀಡಿ. ರುಚಿಯಾದ ಹೋಟೆಲ್‌ ಸ್ಟೈಲ್‌ ಟೀ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!