ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾವ ಆಹಾರ ಸೇವಿಸಿದರೆ ತೂಕ ಕಡಿಮೆ ಆಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಡಯಟ್ ಲಿಸ್ಟ್ ನ ಆಹಾರಗಳು..

ತೂಕ ಹೆಚ್ಚಿಸೋದು ಒಂದು ಕಷ್ಟವಾಗರೇ ತೂಕ  ಇಳಿಸೋದು ಮತ್ತೊಂದು ಸರ್ಕಸ್. ಇದಕ್ಕೆ ಸರಿಯಾದ ವ್ಯಾಯಾಮ, ಆಹಾರ ಪದ್ಧತಿ ಎಲ್ಲವೂ ಇರಬೇಕು. ಕೆಲವರು ತಾವು ಸೇವಿಸುವ ಆಹಾರವನ್ನು ಕಡಿಮೆ ಮಾಡಿದ್ದರೂ, ತೂಕ ಮಾತ್ರ ಕಡಿಮೆ ಆಗಿರೋದಿಲ್ಲ. ಅಂತರು ಈ ಆಹಾರಗಳನ್ನು ತಪ್ಪದೇ ಸೇವಿಸಿ..

ಮೊಟ್ಟೆ:
ಇದರಲ್ಲಿನ ಹೈ ಪ್ರೋಟೀನ್ ಅಂಶವು ಬೇಗ ಹಸಿವು ನೀಗಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಡಿಮೆ ಮಾಡುತ್ತದೆ.

ಹಸಿರು ತರಕಾರಿ:
ಪುದಿನಾ, ಕೋಸು, ಸೊಪ್ಪುಗಳು ಸೇರಿದಂತೆ ಹಸಿರು ತರಕಾರಿ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಕ್ಯಾಲೊರಿ ಗಳು ಸೇರಿಕೊಳ್ಳುವುದಿಲ್ಲ. ಇದು ತೂಕ ಇಳಿಸೋಕೆ ಹೆಚ್ಚು ಲಾಭದಾಯಕ.

ಆಪಲ್ ಸೈಡರ್ ವೆನಿಗರ್:
ದಿನಕ್ಕೆ 2 ಚಮಚ  ಆಪಲ್ ಸೈಡರ್ ವೆನಿಗರ್ ಅನ್ನು ನೀರಿಗೆ ಬೆರಸಿ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.

ಡ್ರೈ ಫ್ರೂಟ್ಸ್:
ಪ್ರತಿ ದಿನ ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಇದರಿಂದ ಕೇವಲ ತೂಕ ಇಳಿಕೆ ಮಾತ್ರವಲ್ಲದೆ, ಹೃದಯ ಸಂಬಂಧಿ ಸಮಸ್ಯೆಗಳಿಗೂ ಪ್ರಯೋಜನಕಾರಿ.

ಅವಕಾಡೋ:
ಇದರಲ್ಲಿ ಹೆಚ್ಚು ಆರೋಗ್ಯಕರ ಫ್ಯಾಟ್ಸ್, ನಾರಿನಾಂಶವಿರುತ್ತದೆ. ಇದರಿಂದ ತೂಕ ಇಳಿಸೋಕೆ ಹೆಚ್ಚು ಲಾಭದಾಯಕ.

ಸಿಟ್ರಸ್ ಹಣ್ಣುಗಳು:
ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್, ನಾರಿನಾಂಶ ಹಾಗೂ ನೀರು ಒದಗಿಸುವಲ್ಲಿ ಸಿಟ್ರಸ್ ಹಣ್ಣುಗಳು ಹೆಚ್ಚು ಸಹಕಾರಿ. ಪ್ರತಿದಿನ ಆರೆಂಟ್, ನಿಂಬೆ, ದ್ರಾಕ್ಷಿಗಳನ್ನು ಸೇವಿಸಿ, ತೂಕ ಇಳಿಸಿ.

ಬೆರ್ರೀಸ್:
ಬ್ಲೂ ಬೆರಿ, ರಾಸ್ಬೆರಿಯಂತಹ ಹಣ್ಣುಗಳಲ್ಲಿ ಇರುವ ಫೈಬರ್ ಅಂಶವು ನಮ್ಮನ್ನು ಇಡೀ ದಿನ ಆರೋಗ್ಯವಾಗಿರಿಸಲು ಸಹಕಾರಿಯಾಗಲಿದ್ದು, ತೂಕ ಇಳಿಸೋಕು ಸಹಾಯ ಮಾಡುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss