ಅಡುಗೆ ಮಾಡುವಾಗ ಏನಾದರೂ ಗ್ಯಾಸ್ ಸ್ಟವ್ ಮೇಲೆ ಚೆಲ್ಲುತ್ತದೆ. ಚೆಲ್ಲಿದ ಕೆಲವು ಪದಾರ್ಥಗಳು ತಿಕ್ಕಿ ತೊಳೆದರೆ ಸ್ವಚ್ಛವಾಗುತ್ತದೆ. ಇನ್ನು ಕೆಲವು ಪದಾರ್ಥಗಳು ಕಲೆಯಾಗಿ ಒಲೆಯ ಮೇಲೆಯೇ ಉಳಿದು ಬಿಡುತ್ತದೆ. ಕಲೆಗಳನ್ನು ನಿವಾರಣೆ ಮಾಡಲು ಈ ಟಿಪ್ಸ್ ಟ್ರೈ ಮಾಡಿ…
ವಿನಿಗರ್:
ವಿನಿಗರ್ನ್ನು ಸಣ್ಣ ಬ್ರೇಶ್ಗೆ ಹಚ್ಚಿಕೊಂಡು ಕಲೆಗಳು ಇರುವ ಜಾಗದಲ್ಲಿ ಉಜ್ಜಬೇಕು. ವಿನಿಗರ್ ಬಳಸಿದರೆ ಕೀಟಗಳು ಸಹ ಹೋಗುತ್ತವೆ. ಕಲೆ ಬೇಗ ಹೋಗುತ್ತದೆ.
ಸೀಮೆ ಎಣ್ಣೆ:
ಬಿಳಿ ಕಲೆಗಳು ಆದರೆ ಅವುಗಳನ್ನು ನಿವಾರಣೆ ಮಾಡಲು ಸೀಮೆ ಎಣ್ಣೆಯನ್ನು ಬಳಸ ಬೇಕು. ಕಲೆಗಳಾದ ಜಾಗದಲ್ಲಿ ಸೀಮೆ ಎಣ್ಣೆ ಹಚ್ಚಿದರೆ ಹುಳಿ ಅಂಶದ ಕಲೆ ಹೋಗುತ್ತದೆ.
ವೈಟ್ ಟೂತ್ ಪೇಸ್ಟ್:
ವೈಟ್ ಟೂತ್ ಪೇಸ್ಟ್ ಕಲೆ ನಿವಾರನೆಗೆ ಬೆಸ್ಟ್. ವೈಟ್ ಕಲರ್ ಇರುವ ಟೂತ್ ಪೇಸ್ಟ್ನ್ನು ಮನೆಯಲ್ಲಿ ಕಲೆಗಳಿರುವ ಜಾಗದಲ್ಲಿ ಹಚ್ಚಿ ನಿಧಾನವಾಗಿ ತಿಕ್ಕಬೇಕು. ಬೇಗ ಕಲೆಯೂ ಹೋಗುತ್ತದೆ.
ಡ್ರೈ ಶೀಟ್:
ಡ್ರೈ ಶೀಟ್ಗಳನ್ನು ನೀರಿನಲ್ಲಿ ನೆನೆಸಿಟ್ಟು ಅವುಗಳಿಂದ ಕಲೆ ಆದಲ್ಲಿ ಉಜ್ಜಬೇಕು. ಕಲೆ ಹೋಗುತ್ತದೆ.
ವಿನಿಗಾರ್ ಜೊತೆ ಅಡುಗೆ ಸೋಡಾ:
ವಿನಿಗಾರ್ ಜೊತೆ ಅಡುಗೆ ಸೋಡಾವನ್ನು ಸೇರಿಸಿಕೊಂಡು ಕಲೆ ಇರುವಲ್ಲಿ ತಿಕ್ಕಿದರೆ ಕಲೆ ಹೋಗುತ್ತದೆ.