ಯಾವತ್ತಾದರೂ ಆಲೂ-ಪನ್ನೀರ್ ಸ್ಟಫ್ಡ್‌ ದೋಸೆ ಟ್ರೈ ಮಾಡಿದ್ದೀರಾ? ಇಲ್ಲಿದೆ ಸಿಂಪಲ್‌ ರೆಸಿಪಿ

ಮಾಮೂಲಿ ದೋಸೆ ತಿಂದು ಬೋರ್‌ ಆಗಿದ್ರೆ ಈ ರೀತಿ ಆಲೂ ಪನ್ನೀರ್ ಸ್ಟಫ್ಡ್‌ ದೋಸೆ ಟ್ರೈ ಮಾಡಿ… ಸಿಂಪಲ್‌ ರೆಸಿಪಿ

ಬೇಕಾಗಿರುವ ಪದಾರ್ಥಗಳು:
ಎಣ್ಣೆ
ಸಾಸಿವೆ
ಜೀರಿಗೆ
ಇಂಗು
ಹಸಿಮೆಣಸಿನಕಾಯಿ
ಈರುಳ್ಳಿ
ಅರಿಶಿನ
ಉಪ್ಪು
ಅಲೂಗಡ್ಡೆ
ಪನನೀರ್
ಬಟಾಣಿ
ಕ್ಯಾಪ್ಸಿಕಂ
ಕೊತ್ತಂಬರಿ
ನಿಂಬು ರಸ
ರವೆ
ಅವಲಕ್ಕಿ
ಅಕ್ಕಿ ಹಿಟ್ಟು
ಮೊಸರು
ನೀರು
ಬೇಕಿಂಗ್‌ ಸೋಡಾ

ಮಾಡುವ ವಿಧಾನ

  • ಮೊದಲು ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಇಂಗು , ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.
  • ನಂತರ ಅದಕ್ಕೆ ಈರುಳ್ಳಿ, ಅರಿಶಿನ, ಉಪ್ಪು ಹಾಕಿ ಫ್ರೈ ಮಾಡಿ.
  • ಬಳಿಕ ಅಲೂಗಡ್ಡೆ, ಪನನೀರ್‌, ಬಟಾಣಿ, ಕ್ಯಾಪ್ಸಿಕಂ, ಕೊತ್ತಂಬರಿ ಹಾಗೂ ನಿಂಬು ರಸ ಹಾಕಿ ಫ್ರೈ ಮಾಡಿ ಸ್ಟಫಿಂಗ್‌ ರೆಡಿ ಮಾಡಿಕೊಳ್ಳಿ.
  • ನಂತರ ಅವಲಕ್ಕಿ ಹಾಗೂ ರವೆಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದಕ್ಕೆ ಅಕ್ಕಿ ಹಿಟ್ಟು, ಉಪ್ಪು, ಮೊಸರು, ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಿಕ್ಸ್‌ ಮಾಡಿ. ಬೇಕಿಂಗ್‌ ಸೋಡಾ ಹಾಕಿ ಕಲಸಿ.
  • ಈಗ ಒಂದು ತವಾದ ಮೇಲೆ ಸಿದ್ಧವಾಗಿರುವ ಹಿಟ್ಟನ್ನು ಹಾಕಿ ಅದರ ಮಧ್ಯೆ ಆಲೂ ಪನ್ನೀರ್‌ ಸ್ಟಫಿಂಗ್‌ ಇಡಿ ಸ್ವಲ್ಪ ಬೇಯುತ್ತಿದ್ದಂತೆ ದೋಸೆಯನ್ನು ರೋಲ್‌ ಮಾಡಿದರೆ ಆಯ್ತು.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!