ಸುಲಭವಾದ ʼಆಲೂ ಫ್ರೈʼ ಟ್ರೈ ಮಾಡಿ.. ಇದು ಬ್ಯಾಚುಲರ್‌ ರೆಸಿಪಿ….

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಊಟದ ಜೊತೆ ಏನಾದರೂ ಸೈಡ್ಸ್‌ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಸುಲಭವಾಗಿ ಮಾಡಬಹುದಾದ ಈ ಆಲೂಫ್ರೈ ನಿಮ್ಮ ಸಮಯವನ್ನು ಉಳಿಸುವುದಲ್ಲದೇ ಊಟದ ರುಚಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಬ್ಯಾಚುಲರ್ಸ್‌ ಗಳಿಗೆ ಹೇಳಿ ಮಾಡಿಸಿದ ರೆಸಿಪಿ.

ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ – ಒಂದು ಅಥವಾ ಎರಡು
ಒಗ್ಗರಣೆಗೆ – ಎರಡು ಟೀಸ್ಪೂನ್‌ ಎಣ್ಣೆ, ಒಂದು ಚಮಚ ಉದ್ದಿನ ಬೇಳೆ, ಒಂದು ಚಮಚ ಸಾಸಿವೆ, ಜೀರಾಪೌಡರ್‌ ಅರ್ಧಚಮಚ, ಕೆಂಪುಮೆಣಸಿನ ಪುಡಿ ಅರ್ಧಚಮಚ, ಪೆಪ್ಪರ್‌ (ಕಾಳುಮೆಣಸು) ಪೌಡರ್‌ ಎರಡು ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:
1. ಮೊದಲು ಆಲೂಗಡ್ಡೆಯ ಸಿಪ್ಪೆ ತೆಗದು ಗೋಲಾಕಾರವಾಗಿ ತೆಳುವಾದ ಸ್ಲೈಸ್‌ ಮಾಡಿ ತಂಪಾದ ಶುದ್ಧ ನೀರಿನಲ್ಲಿ ಹಾಕಿಡಿ.
2. ಪ್ರೈಯಿಂಗ್‌ ಪ್ಯಾನ್‌ ಗೆ ಒಂದುಚಮಚ ಎಣ್ಣೆ ಹಾಕಿ ಕಾಯಿಸಿ, ನಂತರ ಅದಕ್ಕೆ ಉದ್ದು ಹಾಗೂ ಸಾಸಿವೆ ಹಾಕಿ ಘಮಿಸಿದ ಮೇಲೆ ನೀರಲ್ಲಿ ನೆನೆಸಿದ ಆಲೂಗಡ್ಡೆ ಸ್ಲೈಸ್‌ ಅನ್ನು ಬಿಡಿ ಬಿಡಿಯಾಗಿ ಹರಡಿ. ಎರಡೂ ಕಡೆ ಹದವಾಗಿ ಬಾಡಿಸಿ.
3.ನಂತರ ಅದಕ್ಕೆ ಕೆಂಪು ಮೆಣಸಿನ ಪುಡಿ, ಜೀರಾ ಪೌಡರ್‌, ಪೆಪ್ಪರ್‌ ಪೌಡರ್‌ ಹಾಕಿ ಚೆನ್ನಾಗಿ ತಿರುಗಿಸಿ ಫ್ರೈ ಮಾಡಿ. ಬೇಕೆಂದರೆ ಧನಿಯಾ ಪೌಡರ್‌ ಅಥವಾ ಸ್ವಲ್ಪ ಗರಂ ಮಸಾಲಾವನ್ನೂ ಬಳಸಬಹುದು. ಸ್ವಲ್ಪ ಕಂದು ಮಿಶ್ರಿತ ಬಣ್ಣ ಬಂದಮೇಲೆ ಸ್ವಲ್ಪ ಸ್ವಲ್ಪ ನೀರು ಚಿಮುಕಿಸುತ್ತಾ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ.

ಈಸಿಯಾದ ಟೇಸ್ಟೀ ಆಲೂ ಫ್ರೈ ಈಗ ರೆಡಿ. ಊಟದ ಜೊತೆ ಚಪಾತಿಯ ಜೊತೆ ಸವಿಯಿರಿ. ಬಾಳೆಕಾಯಿಯೊಂದಿಗೂ ಇದನ್ನು ಟ್ರೈ ಮಾಡಬಹುದು. ನಿಮ್ಮ ಊಟದ ರುಚಿ ಈಗ ಇನ್ನೂ ಹೆಚ್ಚು ಟೇಸ್ಟಿಯಾಗಿರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!