Thursday, August 18, 2022

Latest Posts

ಹಬ್ಬಕ್ಕೆ ಮಾಡಿ ಈ ಟೇಸ್ಟಿ ಆಪಲ್ ಬರ್ಫಿ: ಇಲ್ಲಿದೆ ಸಿಂಪಲ್ ರೆಸಿಪಿ

ಹಬ್ಬದ ದಿನ ರುಚಿಯಾದ ಸಿಹಿ ಮಾಡಿ ಬಡಿಸೋದು ಹೆಣ್ಣುಮಕ್ಕಳಿಗೆ ಖುಷಿ. ಇಂದೇ ನೀವು ಟ್ರೈ ಮಾಡಿ ಈ ಸಿಂಪಲ್ ಆಪಲ್ ಬರ್ಫಿ

ಬೇಕಾಗಿರುವ ಪದಾರ್ಥಗಳು:

ಸೇಬು
ತುಪ್ಪ
ತೆಂಗಿನ ತುರಿ
ಸಕ್ಕರೆ
ಏಲಕ್ಕಿ ಪುಡಿ
ಪಿಸ್ತಾ

ಮಾಡುವ ವಿಧಾನ

  • ಸೇಬುಗಳ ಸಿಪ್ಪೆ ತೆಗೆದು ಅದನ್ನು ತುರಿದುಕೊಳ್ಳಿ.
  • ನಂತರ ಒಂದು ಪಾತ್ರೆಯಲ್ಲಿ ತುಪ್ಪ, ತೆಂಗಿನ ತುರಿ, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.
  • ಸಕ್ಕರೆ ಕರಗುವ ತನಕ ಬೇಯಿಸಿ.
  • ಬಳಿಕ ತುರಿದ ಸೇಬು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ, ಗಟ್ಟಿ ಹದಕ್ಕೆ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ.
  • ಈಗ ಏಲಕ್ಕಿ ಪುಡಿಯನ್ನು ಸೇರಿಸಿ ಕಲಸಿ.
  • ನಂತರ ಒಂದು ಟ್ರೇ ನಲ್ಲಿ ತಪ್ಪ ಸವರಿ, ಅದರ ಮೇಲೆ ಈ ಆಪಲ್ ಮಿಶ್ರಣ ಹಾಕಿ ಸರಿಯಾದ ಹದಕ್ಕೆ ತಟ್ಟಬೇಕು.
  • ಕೊನೆಯಲ್ಲಿ ಪಿಸ್ತಾ ಸೇರಿಸಿ ತಣ್ಣಗಾಗುವ ವರೆಗೂ ಹಾಗೆ ಬಿಡಿ.
  • ನಂತರ ಅದನ್ನು ಸಣ್ಣ ಬಾಕ್ಸ್ ಆಕಾರಕ್ಕೆ ಕಟ್ ಮಾಡಿದರೆ ನಿಮ್ಮ ಆಪಲ್ ಬರ್ಫಿ ಸಿದ್ಧ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!