ಮಾಮೂಲಿ ಬ್ರೆಡ್ ಟೋಸ್ಟ್, ವೆಜ್ ಟೋಸ್ಟ್ ತಿಂದು ಬೋರ್ ಆಗಿದ್ರೆ ಇಂದೇ ಮಾಡಿ ಹೆಲ್ತಿ ಚಾಕೊಲೇಟ್ ಬ್ರೆಡ್ ಸ್ಲೈಸ್..ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು..
ಬೇಕಾಗಿರುವ ಪದಾರ್ಥಗಳು
ಬ್ರೆಡ್
ಚಾಕೋ ಸಿರಪ್
ಬಾಳೆಹಣ್ಣು
ಆಪಲ್
ಸ್ಟ್ರಾಬೆರಿ
ಮಾಡುವ ವಿಧಾನ:
ಮೊದಲು ಎರಡು ಸ್ಲೈಸ್ ಬ್ರೆಡ್ ಮೇಲೆ ಚಾಕೋ ಸಿರಪ್ ಸವರಿಕೊಳ್ಳಿ.
ನಂತರ ಒಂದರ ಮೇಲೆ ಸಣ್ಣದಾಗಿ ಹೆಚ್ಚಿರುವ ಬಾಳೆಹಣ್ಣು, ಆಪಲ್ ಹಾಗೂ ಸ್ಟ್ರಾಬೆರಿ ಇಡಿ.
ಕೊನೆಯಲ್ಲಿ ಅದರ ಮೇಲೆ ಸ್ವಲ್ಪ ಚಾಕೋ ಸಿರಪ್ ಹಾಕಿ ಮತ್ತೊಂದು ಬ್ರೆಡ್ ಸ್ಲೈಸ್ ಇಂದ ಕವರ್ ಮಾಡಿ.