Friday, July 1, 2022

Latest Posts

ಮಾಮೂಲಿ ಸ್ಟೈಲ್ ಬಿಟ್ಟು ಈ ರೀತಿ ಮಾಡಿ ಕ್ರಿಸ್ಪಿ ಮಿರ್ಚಿ ಬಜ್ಜಿ: ಈಸಿ ರೆಸಿಪಿ

ಈ ತಂಪು ವಾತಾವರಣಕ್ಕೆ ಏನಾದರೂ ಬಿಸಿ ಬಿಸಿ, ಖಾರದ ಸ್ನ್ಯಾಕ್ಸ್‌ ಸೇವಿಸಬೇಕು ಅನಿಸುತ್ತದೆ. ಆಗ ತಪ್ಪದೆ ಮಾಡಿ ಈ ಟೇಸ್ಟಿ ಮಿರ್ಚಿ ಬಜ್ಜಿ

ಬೇಕಾಗಿರುವ ಪದಾರ್ಥಗಳು
ಬಜ್ಜಿ ಮೆಣಸಿನಕಾಯಿ
ಅಕ್ಕಿ ಹಿಟ್ಟು
ಕಡಲೆಹಿಟ್ಟು
ಎಣ್ಣೆ
ನೀರು
ಜೀರಿಗೆ
ಖಾರದ ಪುಡಿ
ಉಪ್ಪು
ಅರಿಶಿನ
ಇಂಗು
ಈರುಳ್ಳಿ
ಕ್ಯಾರೆಟ್
ಕೊತ್ತಂಬರಿ

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಅರಿಶಿನ, ಖಾರದ ಪುಡಿ, ಉಪ್ಪು, ಇಂಗು ಹಾಗೂ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
ಬಜ್ಜಿ ಮೆಣಸಿನಕಾಯಿಯನ್ನು ತೊಳೆದು ಅದರ ಮಧ್ಯದಲ್ಲಿ ಕಟ್‌ ಮಾಡಿ ಅದರೊಳಗೆ ರೆಡಿಯಾಗಿರುವ ಈರುಳ್ಳಿ ಮಿಶ್ರಣವನ್ನು ಬಜ್ಜಿ ಹಿಟ್ಟಿನ ಮಿಶ್ರಣಕ್ಕೆ ಹಾಕಿ.
ನಂತರ ಒಂದು ಬಾಣಲಿಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸಿದ್ಧವಾಗಿರುವ ಮೆಣಸಿನ ಕಾಯಿ ಮಿಶ್ರಣವನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಡೀಪ್ ಫ್ರೈ ಮಾಡಿ.
ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ-ತುರಿದ ಕ್ಯಾರೆಟ್‌, ಉಪ್ಪು ಹಾಗೂ ಚಾಟ್‌ ಮಸಾಲಾ ಮಿಕ್ಸ್‌ ಮಾಡಿ ಬಜ್ಜಿಯ ಮೇಲೆ ಅಲಂಕಾರ ಮಾಡಿ, ಅದರ ಮೇಲೆ ನಿಂಬು ರಸ ಹಾಕಿದರೆ ರೆಡಿಯಾಗುತ್ತೆ ಟೇಸ್ಟಿ ಮಿರ್ಚಿ ಬಜ್ಜಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss