Thursday, July 7, 2022

Latest Posts

ಎಂದಾದರೂ ಮ್ಯಾಗಿಯಿಂದ ಈ ರೆಸಿಪಿ ಮಾಡಿದ್ದೀರಾ? ರುಚಿಯಾದ ಪಫ್ ಮನೆಯಲ್ಲೂ ಮಾಡಬಹುದು ನೋಡಿ

ಮಾಮೂಲಿ ಪ್ಲೇನ್ ಬ್ರೆಡ್ ತಿಂದು ಎಲ್ಲರಿಗೂ ಬೋರ್ ಆಗಿರುತ್ತೆ. ಹಾಗಾಗಿ ಈ ಸಿಂಪಲ್ Maggie Puff ಟ್ರೈ ಮಾಡಿ ನೋಡಿ.. ಸಖತ್ ಟೇಸ್ಟಿ ರೆಸಿಪಿ ನಿಮಗಾಗಿ

ಬೇಕಾಗುವ ಪದಾರ್ಥಗಳು:
ಮ್ಯಾಗಿ
ಬೆಣ್ಣೆ
ಬೆಳ್ಳುಳ್ಳಿ
ಕ್ಯಾರೆಟ್
ಕ್ಯಾಪ್ಸಿಕಂ
ಈರುಳ್ಳಿ
ಟೊಮಾಟೋ
ಸಿಹಿ ಜೋಳ
ಮೈದಾ ಹಿಟ್ಟು
ಜೋಳದ ಹಿಟ್ಟು
ಬ್ರೆಡ್ ಪುಡಿ
ಎಣ್ಣೆ
ಉಪ್ಪು
ನೀರು

ಮಾಡುವ ವಿಧಾನ:

  • ಒಂದು ಬಾಣಲಿಯಲ್ಲಿ ಬೆಣ್ಣೆ, ಬೆಳ್ಳುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ, ಟೊಮಾಟೋ, ಸಿಹಿ ಜೋಳ ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ನಂತರ ಅದಕ್ಕೆ ನೀರು, ಮ್ಯಾಗಿ, ಮ್ಯಾಗಿ ಮಸಾಲಾ ಹಾಕಿ ಬೇಯಿಸಿಕೊಂಡು ಮ್ಯಾಗಿ ಸಿದ್ಧಮಾಡಿಕೊಳ್ಳಿ.
  • ಬಳಿಕ ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಜೋಳದ ಹಿಟ್ಟು, ನೀರು ಹಾಕಿ ಗಂಟು ಇಲ್ಲದ ಹಾಗೆ ಕಲಸಿ. ಮತ್ತೊಂದೆಡೆ ಬ್ರೆಡ್ ಪುಡಿ ಮಾಡಿಟ್ಟುಕೊಳ್ಳಿ.
  • ನಂತರ ಬ್ರೆಡ್ ಸ್ಲೈನ್ ನ ಅಂಚಿನಲ್ಲಿರು ಕಂದು ಬಣ್ಣದ ಭಾಗವನ್ನು ಕಟ್ ಮಾಡಿ ತೆಳ್ಳಗೆ ಲಟ್ಟಿಸಿಕೊಂಡು ಅದರೊಳಗೆ ತಯಾರಾಗಿರುವ ಮ್ಯಾಗಿ ಹಾಕಿ ಪಫ್ ರೀತಿಯಲ್ಲಿ ಮಡಸಿಕೊಳ್ಳಿ.
  • ಬಳಿಕ ಸ್ಟಫ್ ಆಗಿರುವ ಪಫ್ ಅನ್ನು ಮೃದಾ ಹಿಟ್ಟಿನ ಮಿಶ್ರಣದಲ್ಲಿ ಅದ್ದುಕೊಂಡು ಅದನ್ನು ಬ್ರೆಡ್ ಪುಡಿಯಲ್ಲಿ ಹಾಕಿ ತೆಗೆಯಿರಿ
  • ಕೊನೆಯಲ್ಲಿ ಮಡಸಿ ರೆಡಿ ಮಾಡಿರುವ ಪಫ್ ಅನ್ನು ಎಣ್ಣೆಯಲ್ಲಿ ಹಾಕಿ ಕರಿದುಕೊಂಡರೆ ಸಖತ್ ಟೇಸ್ಟಿ Maggie Puff ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss