ಯಾವಾಗಲೂ ಮನೆಯಲ್ಲಿ ಟೊಮಾಟೋ, ಕ್ಯಾಪ್ಸಿಕಂ ಗೊಜ್ಜು ಮಾಡಿರೋದು ಗೊತ್ತು. ಆದರೆ ಈ ವಿಭಿನ್ನ ರೀತಿಯಲ್ಲಿ ನೆಲ್ಲಿಕಾಯಿ ಗೊಜ್ಜು ಮಾಡಿದ್ದೀರಾ?ಹಾಗಿದ್ದರೆ ಇಲ್ಲಿದೆ ಸಿಂಪಲ್ ರೆಸಿಪಿ
ಬೇಕಾಗುವ ಪದಾರ್ಥ:
ನೆಲ್ಲಿಕಾಯಿ
ಬೆಲ್ಲ
ಹುಣಸೆರಸ
ಜೀರಿಗೆ
ಶುಂಠಿ
ಮೆಣಸು
ಸಾಸಿವೆ
ಉಪ್ಪು
ಅರಿಶಿನ
ಚಿಲ್ಲಿ ಪೌಡರ್
ಗರಂ ಮಸಾಲ
ಇಂಗು
ಮಾಡುವ ವಿಧಾನ:
- ಮೊದಲಿಗೆ ನೆಲ್ಲಿಕಾರಿಯನ್ನು ಬೇಯಿಸಿಕೊಂಡು ಅದನ್ನು ಒಂದೆರಡಂತೆ ಸ್ಮಾಶ್ ಮಾಡಿಕೊಳ್ಳಿ.
- ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆ, ಜೀರಿಗೆ, ಸಾಸಿವೆ, ನೆಲ್ಲಿಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದಕ್ಕೆ ಶುಂಠಿ, ಹುಣಸೆ ರಸ, ಉಪ್ಪು ಹಾಕಿ ಬಾಡಿಸಿ.
- ನಂತರ ಸ್ವಲ್ಪ ಬೆಲ್ಲ ಹಾಕಿ. ಅದು ಕರಗಿದ ಬಳಿಕ ಅರಿಶಿನ, ಚಿಲ್ಲಿ ಪೌಡರ್, ಗರಂ ಮಸಾಲ ಹಾಕಿ ಬಾಡಿಸಿಕೊಳ್ಳಿ.
- ಕೊನೆಯಲ್ಲಿ ಸಣ್ಣ ಬಾಣಲಿಯಲ್ಲಿ ಎಣ್ಣೆ, ಇಂಗು, ಮೆಣಸಿನ ಪುಡಿ, ಕರಿಬೇವು ಹಾಕಿ ಅದನ್ನು ಗೊಜ್ಜಿಗೆ ಹಾಕಿ ಕಲಸಿಕೊಂಡರೆ ಸಾಕು.