spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸರಸ್ವತಿ ಪೂಜೆಯ ನೈವೇದ್ಯಕ್ಕಿರಲಿ ಹಯಗ್ರೀವ: ಇಲ್ಲಿದೆ ಈಸಿ ರೆಸಿಪಿ

- Advertisement -Nitte

ಹಬ್ಬಹರಿದಿನಗಳು ಮನೆಯಲ್ಲಿ ಸಿಹಿ ಇಲ್ಲದೆ ಮುಗಿಯೋದೆ ಇಲ್ಲ. ಅದರಲ್ಲೂ ನವರಾತ್ರಿ ದಿನಗಳಲ್ಲಿ ದೇವಿಗೆ ವಿಶೇಷ ನೈವೇದ್ಯ ಇರಲೇಬೇಕು ಅಲ್ವಾ? ಹಾಗಿದ್ದರೆ ಇಂದು ಸರಸ್ವತಿ ಪೂಜೆಗೆ ಮನೆಯಲ್ಲೇ ಮಾಡಿ ಹಯಗ್ರೀವ..

ಬೇಕಾಗಿರುವ ಪದಾರ್ಥಗಳು:

ಕಡಲೆಬೇಳೆ
ಬೆಲ್ಲ
ಕೊಬ್ಬರಿ
ಏಲಕ್ಕಿ ಪುಡಿ
ಗಸಗಸೆ
ತುಪ್ಪ
ಗೋಡಂಬಿ
ದ್ರಾಕ್ಷಿ
ಹಾಲು

ಮಾಡುವ ವಿಧಾನ

  • ಮೊದಲಿಗೆ ಕಡಲೆಬೇಳೆಗೆ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಬೆಲ್ಲ ಪುಡಿ ಮಾಡಿ ಹಾಕಿ ಚೆನ್ನಾಗಿ ಕರಗುವವರೆಗೂ ಕುದಿಸಿ.
  • ಬಳಿಕ ಒಂದು ಸಣ್ಣ ಬಾಣಲಿಯಲ್ಲಿ ಗಸಗಸೆಯನ್ನು ಹುರಿದು, ತುರಿದ ಕೊಬ್ಬರಿ, ಸ್ವಲ್ಪ ಹಾಲು ಹಾಕಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ತದನಂತರ ರುಬ್ಬಿರುವ ಕೊಬ್ಬರಿ ಮಿಶ್ರಣವನ್ನು ಕಡಲೆಬೇಳೆಗೆ ಹಾಕಿ ಚೆನ್ನಾಗಿ ಕಲಸಿ.
  • ಮತ್ತೊಂದು ಸಣ್ಣ ಬಾಣಲಿಯಲ್ಲಿ ತುಪ್ಪ, ಗೋಡಂಬಿ, ದ್ರಾಕ್ಷಿಯ ಒಗ್ಗರಣೆ ಮಾಡಿ ಸಿದ್ಧವಾಗಿರುವ ಹಯಗ್ರೀವಕ್ಕೆ ಹಾಕಿದರೆ ಆಯ್ತು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss