ದೋಸೆಗೆ ಯಾವಾಗಲೂ ಚಟ್ನಿ, ಪಲ್ಯ ಮಾತ್ರ ಮಾಡ್ತೀರಾ? ಈ ಬಾರಿ ತರಗಾರಿ ಸಾಗೂ ಟ್ರೈ ಮಾಡಿ. ಇದು ಸುಲಭ ಹಾಗೂ ತುಂಬಾನೇ ಟೇಸ್ಟಿ. ಒಂದೆರಡು ದೋಸೆ ಹೆಚ್ಚೇ ತಿಂದುಬಿಡಬಹುದು. ಇದು ಗ್ರೇವಿ ಆಗಿರೋದರಿಂದ ದೋಸೆ ಡ್ರೈ ಆದರೂ ಕೂಡ ತಿನ್ನಬಹುದು. ಹೇಗೆ ಮಾಡೋದು ನೋಡಿ..
ಬೇಕಾಗುವ ಸಾಮಾಗ್ರಿ
ಹೆಚ್ಚುವುದಕ್ಕೆ
- ಈರುಳ್ಳಿ
- ಟೊಮ್ಯಾಟೊ
- ಕ್ಯಾರೆಟ್
- ಬೀನ್ಸ್
- ಕ್ಯಾಪ್ಸಿಕಂ
- ನವಿಲು ಕೋಸು
ರುಬ್ಬಲು
- ಈರುಳ್ಳಿ
- ಟೊಮ್ಯಾಟೊ
- ಹಸಿಮೆಣಸು
- ಕಾಯಿ
- ಶುಂಠಿ
- ಬೆಳ್ಳುಳ್ಳಿ
- ಖಾರದ ಪುಡಿ
- ಸಾಂಬಾರ್ ಪುಡಿ
ಮಾಡುವ ವಿಧಾನ
- ಮೊದಲು ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ ಟೊಮ್ಯಾಟೊ ಹಾಕಿ.
- ನಂತರ ಅದಕ್ಕೆ ತರಕಾರಿಗಳನ್ನು ಹಾಕಿ ಬಾಡಿಸಿ.
- ಇತ್ತ ಎಲ್ಲ ವಸ್ತುಗಳನ್ನು ಮಿಕ್ಸಿ ಮಾಡಿ.
- ಮಿಕ್ಸಿಯಾದ ಮಿಶ್ರಣವನ್ನು ತರಕಾರಿ ಒಳಗೆ ಹಾಕಿ.
- ಉಪ್ಪು ಹಾಕಿ ಎರಡು ವಿಶಲ್ ಕೂಗಿಸಿದರೆ ಸಾಗೂ ರೆಡಿ