ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಳಗ್ಗೆಯಿಂದಲೇ ಹುಳಿ ತೇಗು ಸಮಸ್ಯೆ ಪ್ರಾರಂಭವಾಗುತ್ತದೆಯೇ? ಎದೆಉರಿ, ಹುಳಿ ತೇಗು ಸಮಸ್ಯೆಗೆ ಇಲ್ಲಿದೆ ಪರಿಹಾರ…

ಹುಳಿ ತೇಗು, ಎದೆ ಉರಿ ಇವೆಲ್ಲವೂ ಆ್ಯಸಿಡಿಟಿ ಲಕ್ಷಣಗಳು. ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವಿಸದಿದ್ದರೆ ಆ್ಯಸಿಡಿಟಿ ಬರುತ್ತದೆ. ಹುಳಿ ತೇಗು ಬಂದರೆ ಎದೆಯೆಲ್ಲಿ ಬೆಂಕಿ ಇಟ್ಟುಕೊಂಡಂತಾಗುತ್ತದೆ. ಈ ಸಮಸ್ಯೆಗೆ ವೈದ್ಯರ ಬಳಿ ಹೋಗುವುದಕ್ಕಿಂತ ಮನೆಯಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿದೆ ಪವರ್ ಫುಲ್ ಮನೆ ಮದ್ದು…

  • ತಾಮ್ರದ ಪಾತ್ರೆ: ದಿನ  ರಾತ್ರಿ ಮಲಗುವ ಮುನ್ನ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿಕೊಂಡಿರಿ ಅದನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಹೀಗೆ ಒಂದು ತಿಂಗಳು ಮಾಡಿದರೆ ಹುಳಿ ತೇಗು ಸಮಸ್ಯೆ ನಿವಾರಣೆಯಾಗುತ್ತದೆ.
  • ದಾಳಿಂಬೆ ರಸ: ಹುಳಿ ತೇಗು ಜೋರಾಗಿ ಬರುತ್ತಿದ್ದರೆ ದಾಳಿಂಬೆ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
  • ತಣ್ಣಗಿನ ಹಾಲು: ತಡೆದುಕೊಳ್ಳಲು ಆಗದಷ್ಟು ಹುಳಿ ತೇಗು ಬರುತ್ತಿದ್ದರೆ ತಣ್ಣ ಹಾಲನ್ನು ಸೇವಿಸಿ. ತಕ್ಷಣ ಕಡಿಮೆ ಆಗುತ್ತದೆ.
  • ಜೀರಿಗೆ, ಓಂ:  ಜೀರಿಗೆ, ಓಂ ಕಾಳನ್ನು ನೀರಿಗೆ ಹಾಕಿಕೊಂಡು ಕುದಿಸಿ ನಂತರ ಸೇವಿಸುವುದರಿಂದ ಹುಳಿ ತೇಗು ನಿವಾರಣೆಯಾಗುತ್ತದೆ. ಇದನ್ನು ದಿನದಲ್ಲಿ ಒಂದು ಹೊತ್ತು ಸೇವಿಸಿದರೆ ಸಾಕು.
  • ಕೊತ್ತಂಬರಿ, ಮೆಂತೆ: ರಾತ್ರಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು ನಿವಾರಣೆಯಾಗುತ್ತದೆ.
  • ಎಳನೀರು: ಸಾಧ್ಯವಾದರೆ ದಿನದಲ್ಲಿ ಒಮ್ಮೆ ಒಂದು ಲೋಟ ಎಳನೀರನ್ನು ಸೇವಿಸುವುದು ರೂಢಿಸಿಕೊಳ್ಳಿ. ಇದನ್ನು ನಿಯಮಿತವಾಗಿ ಸೇವಿಸಿದರೆ ಹುಳಿ ತೇಗು ನಿವಾರಣೆಯಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss