Sunday, August 14, 2022

Latest Posts

ಮಧುಮೇಹಿಗಳಿಗೆ ಮಾಡಿಕೊಡಿ ಈ ಹೆಲ್ತಿ ಓಟ್ಸ್ ಮಸಾಲಾ: ಸಿಂಪಲ್ ರೆಸಿಪಿ

ಈ ಮಧುಮೇಹಿಗಳಿಗೆ ಯಾವುದೇ ಆಹಾರ, ತಿಂಡಿ ಕೊಟ್ಟರು ಶುಗರ್ ಹೆಚ್ಚಾಗುವ ಭೀತಿ ಅಲ್ವಾ? ನೀವು ರುಚಿಯಾದ ಆಹಾರ ತಿನ್ನಬೇಕೆಂದರೆ ಈ ರೆಸಿಪಿ ಟ್ರೈ ಮಾಡಿ.

ಬೇಕಾಗಿರುವ ಪದಾರ್ಥಗಳು

ಓಟ್ಸ್
ಈರುಳ್ಳಿ
ಒಣಮೆಣಸಿನಕಾಯಿ
ಕರಿಬೇವು
ಎಣ್ಣೆ
ತೆಂಗಿನ ತುರಿ
ತುರಿದ ಕ್ಯಾರೆಟ್
ಕೊತ್ತಂಬರಿ
ಮಡಿಕೆ ಕಾಳು(ನೆನೆಸಿಟ್ಟ)
ಸಾಸಿವೆ
ಜೀರಿಗೆ
ಅರಿಶಿನ
ನಿಂಬು ರಸ

ಮಾಡುವ ವಿಧಾನ

  • ಮೊದಲಿಗೆ ಮಡಿಕೆ ಕಾಳಿಗೆ ನೀರು, ಉಪ್ಪು ಹಾಕಿ ಬೇಯಿಸಿಕೊಳ್ಳಿ.
  • ನಂತರ ಮತ್ತೊಂದು ಪಾತ್ರೆಯಲ್ಲಿ ಓಟ್ಸ್ ಅನ್ನು ನೀರಿನಲ್ಲಿ ನೆನೆಸಿಟ್ಟು ಶೋಧಿಸಿ ಅದನ್ನು ಬಿಸಿ ಮಾಡಿಕೊಳ್ಳಿ.
  • ಬಳಿಕ ಒಂದು ಪ್ಯಾನ್ ನಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಫ್ರೈ ಮಾಡಿ ನಂತರ ಅದಕ್ಕೆ ಬೇಯಿಸಿಟ್ಟ ಮಡಿಕೆಕಾಳು ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ಓಟ್ಸ್, ಅರಿಶಿನ ಸೇರಿಸಿ ಮತ್ತು 2 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿ.
  • ನಿಂಬೆ ರಸ, ಕ್ಯಾರೆಟ್, ತೆಂಗಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಮಿಶ್ರಣ ಮಾಡಿದರೆ ಆಯ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss