Thursday, July 7, 2022

Latest Posts

ಹಬ್ಬದ ದಿನ ಒಬ್ಬಟ್ಟು ಸಾರು ಮಾಡಿಲ್ಲ ಅಂದ್ರೆ ಹೇಗೆ? 20 ನಿಮಿಷದಲ್ಲಿ ಮಾಡ್ಬೋದು ನೋಡಿ.. ಸಿಂಪಲ್ ರೆಸಿಪಿ

ವರ್ಷದ ಮೊದಲ ಹಬ್ಬ ಯುಗಾದಿ.. ಇವತ್ತು ಮನೆಯಲ್ಲಿ ಬೇಳೆ ಒಬ್ಬಟ್ಟು ಮಾಡಿಲ್ಲ ಅಂದ್ರೆ ಹಬ್ಬದ ಕಳೆಯೇ ಇರೋದಿಲ್ಲ. ಅದಕ್ಕೆ ಸಿಂಪಲ್ ಆಗಿ ಮಾಡುವ ರೆಸಿಪಿ ನಿಮಗಾಗಿ

ಬೇಕಾಗುವ ಪದಾರ್ಥಗಳು:
ತೊಗರಿಬೇಳೆ
ಬೆಲ್ಲ
ತೆಂಗಿನ ತುರಿ
ಹುಣಸೆ ರಸ
ಉಪ್ಪು
ಮೆಣಸಿನಪುಪುಡಿ(ದನಿಯಾ, ಮೆಂತೆ ಮಿಶ್ರಿತ)
ಸಾಸಿವೆ
ಎಣ್ಣೆ

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ಮೊದಲಿಗೆ ತೊಗರಿಬೇಳೆಯನ್ನು ಬೇಯಿಸಿಕೊಳ್ಳಿ. ನಂತರ ಬೇಳೆಯ ನೀರನ್ನು ಶೋಧಿಸಿ ಪಕ್ಕಕ್ಕಿಡಿ.
  • ಬೆಂದ ಬೇಳೆಗೆ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದಕ್ಕೆ ತೆಂಗಿನತುರಿ ಹಾಕಿ ಕಲಿಸಿಕೊಳ್ಳಿ..
  • ಗಟ್ಟಿಯಾದ ನಂತರ ಅದನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
  • ನಂತರ ಶೋಧಿಸಿದ್ದ ಬೇಳೆಯ ನೀರಿಗೆ ಹುಣಸೆ ರಸ, ಮೆಣಸಿನಪುಡಿ ಹಾಕಿ ಸ್ವಲ್ಪ ಕುದಿಸಿಕೊಳ್ಳಿ..
  • ಕೊನೆಯಲ್ಲಿ ಅದಕ್ಕೆ ರುಬ್ಬಿಕೊಂಡಿದ್ದ ಮಿಶ್ರಣವನ್ನು ಹಾಕಿ ಕುದಿಸಿ.. ಸಾಸಿವೆ ಒಗ್ಗರಣೆ ಹಾಕಿದರೆ ಸಿದ್ಧವಾಗಲಿದೆ ಯುಗಾದಿ ಸ್ಪೆಷಲ್ ಒಬ್ಬಟ್ಟು ಸಾರು..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss