ಮೈದಾದಲ್ಲಿ ಪೂರಿ ಮಾಡೋದು ಮಾಮೂಲಿ ಆದರೆ ಆರೋಗ್ಯ ವೃದ್ಧಿಸಿಕೊಳ್ಳೋಕೆ ಗೋಧಿ ಹಿಟ್ಟಿನಿಂದ ಪಾಲಕ್ ಪೂರಿ ಮಾಡಿ..
ಬೇಕಾಗಿರುವ ಪದಾರ್ಥಗಳು
ಗೋಧಿ ಹಿಟ್ಟು
ಪಾಲಕ್ ಸೊಪ್ಪಿ
ಶುಠಿ
ಹಸಿಮೆಣಸಿನಕಾಯಿ
ಉಪ್ಪು
ಜೀರಿಗೆ
ಎಣ್ಣೆ
ಮಾಡುವ ವಿಧಾನ
- ಮೊದಲು ಪಾಲಕ್ ಸೊಪ್ಪನ್ನು ಉಪ್ಪು ಹಾಕದೆ ಬೇಯಿಸಿಕೊಳ್ಳಿ.
- ನಂತರ ಬೆಂದ ಪಾಲಕ್ ಸೊಪ್ಪು, ಶುಂಠಿ, ಹಸಿಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
- ಬಳಿಕ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಉಪ್ಪು, ಜೀರಿಗೆ, ರುಬ್ಬಿಕೊಂಡಿರುವ ಪಾಲಕ್ ಮಿಶ್ರಣ ಹಾಗೂ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
- ನಂತರ ಅದನ್ನು ಸಣ್ಣ ಸಣ್ಣ ಪೂರಿಗಳಂತೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಕರೆದರೆ ಟೇಸ್ಟಿ ಪಾಲಕ್ ಪೂರಿ ಸವಿಯಲು ಸಿದ್ಧ