ಮನೆಯಲ್ಲಿ ಮಧುಮೇಹಿಗಳು, ಅನೋರೋಗ್ಯದಿಂದ ಬಳಲುತ್ತಿರುವವರು ಇದ್ದರೆ ಅಡುಗೆಯಲ್ಲಿ ಕಡಿಮೆ ಎಣ್ಣೆ ಬಳಸೋದು ಕಾಮನ್. ಇನ್ನು ಚಪಾತಿ ಮಾಡಿದರೆ ಅದು ಮೃದುವಾಗೋಕೆ ತುಂಬಾ ಕಷ್ಟ ಪಡಬೇಕಾಗಿಲ್ಲ.. ಈ ರೀತಿ ಆಯಿಲ್ ಲೆಸ್ ಫುಲ್ಕಾ ಮಾಡಿಕೊಡಿ
ಬೇಕಾಗಿರುವ ಪದಾರ್ಥಗಳು
ಗೋಧಿ ಹಿಟ್ಟು
ಉಪ್ಪು
ನೀರು
ತುಪ್ಪ
ಮಾಡುವ ವಿಧಾನ:
ಮೊದಲಿಗೆ ಗೋಧಿ ಹಿಟ್ಟು, ಉಪ್ಪು, ನೀರು ಹಾಕಿ ಚಪಾತಿ ಹದಕ್ಕಿಂತ ಮೃದುವಾಗಿ ಕಲಸಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ.
ನಂತರ ತವಾದ ಮೇಲೆ ಎಣ್ಣೆ ಹಾಕದೆ ಒಂದು ಬದಿಯನ್ನು ರೋಸ್ಟ್ ಮಾಡಿಕೊಳ್ಳಿ. ಮತ್ತೊಂದು ಬದಿಯನ್ನು ನೇರ ಸ್ಟವ್ ಮೇಲೆಯೇ ೨ ಕ್ಷಣ ರೋಸ್ಟ್ ಮಾಡಿ ಪಕ್ಕಕ್ಕೆ ಇಡಿ. ಬಿಸಿ ಇರುವಾಗ ಅದರ ಮೇಲೆ ತುಪ್ಪ ಸವರಿಕೊಂಡು ತಿಂದರೆ ಬೊಂಬಾಟ್ ಟೇಸ್ಟ್ ಕೊಡುತ್ತೆ