Monday, August 8, 2022

Latest Posts

10 ನಿಮಿಷದಲ್ಲಿ ಮಾಡಿ ಸೇವಿಸಬಹುದು ಈ ಪಾಯಸ..ಯಾವುದು ಗೊತ್ತಾ? ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಹಬ್ಬದ ದಿನ ಪಾಯಸ ಮಾಡುವುದು ಸಹಜ. ಆದರೆ ಮನೆಗೆ ನೆಂಟರು ಬಂದಾಗ ದಿಢೀರ್ ಆಗಿ ಮಾಡಬಹುದಾದ ಸಿಂಪಲ್ ಮತ್ತು ಟೇಸ್ಟಿ ಹೆಸರುಬೇಳೆ ಪಾಯಸ.. ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಬೇಕಾಗುವ ಪದಾರ್ಥಗಳು:
ಹೆಸರುಬೇಳೆ
ಬೆಲ್ಲ
ಕೇಸರಿ
ಗೋಡಂಬಿ
ಬಾದಾಮಿ
ದ್ರಾಕ್ಷಿ
ಏಲಕ್ಕಿ ಪುಡಿ
ಕೊಬ್ಬರಿ ತುರಿ

ಮಾಡುವ ವಿಧಾನ:

  • ಮೊದಲಿಗೆ ಒಂದು ಪಾತ್ರೆಯಲ್ಲಿ ಹೆಸರುಬೇಳೆಯನ್ನು ಬೇಯಿಸಿಕೊಳ್ಳಿ.
  • ನಂತರ ಬೆಲ್ಲವನ್ನು ಪುಡಿ ಮಾಡಿಕೊಂಡು ಹೆಸರುಬೇಳೆಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.
  • ಬಳಿಕ ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಅದನ್ನು ಬೇಳೆಗೆ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.
  • ಕೊನೆಗೆ ಅದಕ್ಕೆ ತುಪ್ಪ, ಗೋಡಂಬಿ, ಬಾದಾಮಿ ಹಾಕಿ ಒಗ್ಗರಣೆ ಮಾಡಿ ಪಾಯಸಕ್ಕೆ ಹಾಕಿ.
  • ಕೊನೆಯಲ್ಲಿ ಪಾಯಸಕ್ಕೆ ದ್ರಾಕ್ಷಿ, ಕೇಸರಿ, ಏಲಕ್ಕಿ ಪುಡಿ ಹಾಕಿ ಕಲಸಿದರೆ ಟೇಸ್ಟಿ ಹೆಸರುಬೇಳೆ ಪಾಯಸ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss