ಬೇಕಾಗಿರುವ ಸಾಮಾಗ್ರಿಗಳು:
ಟೊಮಾಟೊ
ಕಾಯಿತುರಿ
ಖಾರದಪುಡಿ
ಸಾಂಬಾರ್ ಪುಡಿ
ಬೆಳ್ಳುಳ್ಳಿ
ಕೊತ್ತಂಬರಿ
ಸಾಸಿವೆ
ಇಂಗು
ಎಣ್ಣೆ
ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಟೊಮಾಟೋ ಬೇಯಿಸಿಕೊಳ್ಳಿ.
ನಂತರ ಕಾಯಿತುರಿ,ಬೆಳ್ಳುಳ್ಳಿ, ಕೊತ್ತಂಬರಿ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.
ಬಳಿಕ ಬೆಂದ ಟೊಮಾಟೋಗೆ ರುಬ್ಬಿಕೊಂಡಿರುವ ಮಿಶ್ರಣ ಹಾಕಿ, ಖಾರದ ಪುಡಿ, ಸಾಂಬಾರ್ ಪುಡಿ, ಇಂಗು ಹಾಕಿ ಕುದಿಸಿ.
ಕೊನೆಯಲ್ಲಿ ಸಾಸಿವೆ ಒಗ್ಗರಣೆ ಹಾಕಿದರೆ ರುಚಿಯಾದ ರಸಂ ಸವಿಯಲು ಸಿದ್ಧ