ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಮೂಲಂಗಿ ರಾಮಬಾಣ. ದಿನಕ್ಕೆ ಎರಡು ಪೀಸ್ ಹಸಿ ಮೂಲಂಗಿ ತಿಂದರೆ ಮೂಲವ್ಯಾಧಿ ಹಿಡಿತದಲ್ಲಿ ಇರುತ್ತದೆ. ಮೂಲಂಗಿ ಗೊಜ್ಜು ವಾರಕ್ಕೆ ಒಮ್ಮೆಯಾದರೂ ಮಾಡಿ ತಿನ್ನಿ.. ಹೇಗೆ ಮಾಡೋದು ನೋಡಿ..
ಸಾಮಾಗ್ರಿಗಳು
ಮೂಲಂಗಿ
ಹಸಿಮೆಣಸು
ಬೆಳ್ಳುಳ್ಳಿ
ಜೀರಿಗೆ
ಕಾಳುಮೆಣಸು
ಈರುಳ್ಳಿ
ಕಡ್ಲೆಬೇಳೆ
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಸಿಮೆಣಸು,ಕೊತ್ತಂಬರಿ,ಜೀರಿಗೆ,ಬೆಳ್ಳುಳ್ಳಿ ಹಾಕಿ ರುಬ್ಬಿ.
ನಂತರ ಇದಕ್ಕೆ ಕತ್ತರಿಸಿದ ಮೂಲಂಗಿ ಹಾಕಿ ರುಬ್ಬಿ.
ಈಗ ಬಾಣಲೆಗೆ ಎಣ್ಣೆ,ಸಾಸಿವೆ,ಈರುಳ್ಳಿ ಹಾಕಿ ಬಾಡಿಸಿ.
ನಂತರ ರುಬ್ಬಿದ ಮೂಲಂಗಿ ಹಾಕಿ.
ಹಸಿವಾಸನೆ ಹೋಗುವವರೆಗೂ ಬಾಡಿಸಿ ತಿನ್ನಿ..