Saturday, August 13, 2022

Latest Posts

ಪೂರಿಯಿಂದ ಮಾಡಿನೋಡಿ ಹಾಲುಹೋಳಿಗೆ ರೆಸಿಪಿ.. ಇದಕ್ಕೆ ಬೇಕಾಗಿರೋದು ನಾಲ್ಕು ಸಾಮಾಗ್ರಿ ಮಾತ್ರ…

ಪೂರಿ ಮಾಡಿದಾಗಲೆಲ್ಲ ನಾವು ಹೇಳುವ ಈ ಸಿಹಿತಿಂಡಿಯನ್ನು ನೀವು ಮಾಡಬಹುದು. ಮಕ್ಕಳಿಗೆ ಈ ಹಾಲುಪೂರಿ ತುಂಬಾನೇ ಇಷ್ಟ ಆಗುತ್ತದೆ. ಡ್ರೈ ಫ್ರೂಟ್ಸ್ ತುಂಬಿರುವ ಈ ಸಿಹಿತಿಂಡಿ ಮಾಡೋದು ಹೇಗೆ ನೋಡಿ..

ಬೇಕಾಗಿರುವ ಸಾಮಾಗ್ರಿಗಳು
ಹಾಲು
ಪೂರಿ
ದ್ರಾಕ್ಷಿ
ಗೋಡಂಬಿ
ಬಾದಾಮಿ
ಉತ್ತುತ್ತೆ
ಸಕ್ಕರೆ
ಏಲಕ್ಕಿ

ಮಾಡುವ ವಿಧಾನ
ಹಾಲಿಗೆ ಸಕ್ಕರೆ,ತುಪ್ಪ ಹಾಗೂ ಏಲಕ್ಕಿ ಹಾಕಿ ಕುದಿಸಿ.
ಸ್ವಲ್ಪ ಕುದ್ದ ನಂತರ ಅದಕ್ಕೆ ಎಲ್ಲ ಡ್ರೈಫ್ರೂಟ್ಸ್ ಹಾಕಿ.
ಇಷ್ಟವಿದ್ದಲ್ಲಿ ಕಸ್ಟರ್ಡ್ ಪೌಡರ್ ಅಥವಾ ಬಾದಾಮಿ ಪುಡಿ ಬಳಸಬಹುದು.
ನಂತರ ಎಣ್ಣೆಯಲ್ಲಿ ಕರಿದ ಪೂರಿಯನ್ನು ಹಾಲಿನಲ್ಲಿ ಅದ್ದಿಡಿ.
ಒಂದು ಗಂಟೆ ಹಾಲಿನಲ್ಲಿ ನೆಂದ ನಂತರ ಹಾಲನ್ನು ಪೂರಿ ಹೀರಿಕೊಂಡಿರುತ್ತದೆ.
ಇದೀಗ ನೀವು ಹಾಲುಪೂರಿಯನ್ನು ಸವಿಯಬಹದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss