ಸಂಜೆ ಕಾಫಿ ಜೊತೆಗೆ ಏನಾದರೂ ಖಾರವಾಗಿ ಸವಿಯಲು ಬಯಸುವವರು ಈ ಸಿಂಪಲ್ ಆಲೂ ರೆಸಿಪಿ ಟ್ರೈ ಮಾಡಿ ನೋಡಿ
ಬೇಕಾಗುವ ಪದಾರ್ಥಗಳು
ತುರಿದ ಆಲೂಗಡ್ಡೆ
ಈರುಳ್ಳಿ
ಮೆಣಸಿನಕಾಯಿ
ಮೆಣಸು(ಪುಡಿ)
ಬೆಳ್ಳುಳ್ಳಿ
ಉಪ್ಪು
ಜೀರಿಗೆ
ಅಕ್ಕಿ ಹಿಟ್ಟು
ಮೊಟ್ಟೆ
ನೀರು
ಎಣ್ಣೆ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ತುರಿದ ಆಲೂಗಡ್ಡೆ, ಈರುಳ್ಳಿ, ಮೆಣಸಿನಕಾಯಿ, ಮೆಣಸು(ಪುಡಿ), ಬೆಳ್ಳುಳ್ಳಿ, ಉಪ್ಪು, ಜೀರಿಗೆ, ಅಕ್ಕಿ ಹಿಟ್ಟು, ಮೊಟ್ಟೆ ಹಾಗೂ ಅಗತ್ಯವಿದ್ದರೆ ನೀರು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ.
ನಂತರ ಒಂದು ತವಾದ ಮೇಲೆ ಎಣ್ಣೆ ಸವರಿಕೊಳ್ಳಿ. ನಂತರ ರೆಡಿ ಮಾಡಿರುವ ಆಲೂಗಡ್ಡೆ ಮಸಾಲವನ್ನು ತವಾದ ಮೇಲೆ ಸಣ್ಣದಾಗಿ ತಟ್ಟಿ ಎರಡೂ ಕಡೆ ಸುಟ್ಟರೆ ಟೇಸ್ಟಿಯಾದ ಆಲೂ ಎಗ್ ಟೋಸ್ಟ್ ರೆಡಿ.. ಸರ್ವ್ ಮಾಡುವಾಗ ಅದನ್ನ ನಿಮ್ಮ ಇಷ್ಟದ ಆಂಗಲ್ ನಲ್ಲಿ ಕಟ್ ಮಾಡಿ ಕೆಚಪ್ ಜೊತೆ ಕೊಡಿ