Wednesday, August 17, 2022

Latest Posts

ತುಂಬಾ ಈಸಿಯಾಗಿ ಮಾಡ್ಬೋದು ಈ ಸ್ವೀಟ್ ಕೊತ್ತಂಬರಿ ತೊಕ್ಕು: ಇಲ್ಲಿದೆ ರೆಸಿಪಿ

ಅನ್ನಕ್ಕೂ ಸೈ, ಚಪಾತಿಗೂ ಸೈ ಈ ಕೊತ್ತಂಬರಿ ತೊಕ್ಕು.. ಸಿಂಪಲ್ ಆಗಿ ಮಾಡೋದು ಹೇಗೆ ಅಂತ ನೋಡಿ

ಬೇಕಾದ ಪದಾರ್ಥಗಳು:

ಕೊತ್ತಂಬರಿ
ಮೆಂತ್ಯೆ
ಜೀರಿಗೆ
ಒಣಮೆಣಸಿನಕಾಯಿ
ಹುಣಸೆ ಹಣ್ಣು
ಧನಿಯಾ
ಸಾಸಿವೆ
ಉಪ್ಪು
ಎಣ್ಣೆ
ಬೆಲ್ಲ

ಮಾಡುವ ವಿಧಾನ:
ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆ, ಕೊತ್ತಂಬರಿ ಹಾಕಿ ಫ್ರೈ ಮಾಡಿ ಪಕ್ಕಕ್ಕಿಡಿ.
ನಂತರ ಅದಕ್ಕೆ ಅರ್ಧ ಚಮಚ ಮೆಂತ್ಯೆ, 1 ಚಮಚ ಜೀರಿಗೆ, ಒಣಮೆಣಸಿನಕಾಯಿ, 2 ಚಮಚ ಧನಿಯಾ ಹಾಕಿ ಹುರಿದುಕೊಳ್ಳಿ.
ತಣ್ಣಕಾದ ನಂತರ ಅದನ್ನು ಪುಡಿ ಮಾಡಿಕೊಳ್ಳಿ. ಈ ಪುಡಿಗೆ ಹುರಿದ ಕೊತ್ತಂಬರಿ ಸೊಪ್ಪು, ಉಪ್ಪು, ಸ್ವಲ್ಪ ಬೆಲ್ಲ ಹಾಕಿ ಗಟ್ಟಿಯಾಗಿ ರುಬ್ಬಿಕೊಂಡು ಕೊನೆಯಲ್ಲಿ ಅದಕ್ಕೆ ಸಾಸಿವೆ ಒಗ್ಗರಣೆ ಕೊಟ್ಟರೆ ಸಿದ್ಧವಾಗಲಿದೆ ಟೇಸ್ಟಿ ಕೊತ್ತಂಬರಿ ತೊಕ್ಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!