ಸಂಜೆ ಹೊತ್ತು ಹೆಚ್ಚು ಸ್ನ್ಯಾಕ್ಸ್ ಸೇವಿಸೋಕೆ ಆಗದವರಿಗೆ ಮಾಡಿ ಕೊಡಿ ಈ ಸಿಂಪಲ್ ಬ್ರೆಡ್ ಮಸಾಲಾ.. ಇಲ್ಲಿದೆ ನೋಡಿ ಟೇಸ್ಟಿ ರೆಸಿಪಿ
ಬೇಕಾಗುವ ಪದಾರ್ಥಗಳು:
ಬ್ರೆಡ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಟೊಮಾಟೋ
ಉಪ್ಪು
ಚಿಲ್ಲಿ ಪೌಡರ್
ಗರಂ ಮಸಾಲಾ
ಕೊತ್ತಂಬರಿ
ಚಾಟ್ ಮಸಾಲಾ
ಮಾಡುವ ವಿಧಾನ:
- ಮೊದಲಿಗೆ ಬ್ರೆಡ್ ಗಳನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಿ.
- ನಂತರ ಒಂದು ಪ್ಯಾನ್ ಗೆ ಎಣ್ಣೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮಾಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ.
- ಬಳಿಕ ಅದಕ್ಕೆ ಚಾಟ್ ಮಸಾಲಾ, ಗರಂ ಮಸಾಲಾ, ಉಪ್ಪು, ಚಿಲ್ಲಿ ಪೌಡರ್, ಕೊತ್ತಂಬರಿ ಹಾಕಿ ಕಲಸಿ.
- ಕೊನೆಯಲ್ಲಿ ಅದಕ್ಕೆ ಬ್ರೆಡ್ ಗಳನ್ನು ಹಾಕಿ ಚೆನ್ನಾಗಿ ಕಲಸಿ ಬಿಸಿ ಮಾಡಿದರೆ ರೆಡಿಯಾಗಲಿದೆ ಟೇಸ್ಟಿ ಬ್ರೆಡ್ ಮಸಾಲಾ