ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗೋಧಿ ಹಿಟ್ಟಲ್ಲಿ ಯಾವಾಗಲೂ ಚಪಾತಿ ಮಾಡುತ್ತೀರಾ? ಹಾಗಿದ್ದರೆ ಈ ಸಿಂಪಲ್ ರೆಸಿಪಿ ಟ್ರೈ ಮಾಡಿ

ಗೋಧಿ ಹಿಟ್ಟಿನಲ್ಲಿ ಸಾಮಾನ್ಯ ಎಲ್ಲರೂ ಚಪಾತಿ, ಪೂರಿ ಮಾಡಿರುತ್ತಾರೆ. ಆದರೆ ಇನ್ನು ಮುಂದೆ ಗೋಧಿ ದೋಸೆ ಕೂಡ ಮಾಡಬಹುದು. ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಬೇಕಾಗುವ ಪದಾರ್ಥಗಳು:

ಗೋಧಿ ಹಿಟ್ಟು
ಹಸಿ ಮೆಣಸು
ಈರುಳ್ಳಿ
ಟೊಮಾಟೋ
ಕೊತ್ತಂಬರಿ
ಸಾಸಿವೆ
ಜೀರಿಗೆ
ಉದ್ದಿನಬೇಳೆ
ಕಡಲೇಬೇಳೆ
ಉಪ್ಪು

ಮಾಡುವ ವಿಧಾನ:

  • ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು, ಉಪ್ಪು ಮತ್ತು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
  • ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೇಬೇಳೆ, ಜೀರಿಗೆ ಹಾಕಿ ಫ್ರೈ ಮಾಡಿ.
  • ನಂತರ ಅದಕ್ಕೆ ಹೆಚ್ಚಿರುವ ಈರುಳ್ಳಿ, ಟೊಮಾಟೋ, ಕೊತ್ತಂಬರಿ, ಹಸಿ ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ
  • ಕೊನೆಯಲ್ಲಿ ಕಲಸಿರುವ ಗೋಧಿ ಹಿಟ್ಟಿಗೆ ಈ ತರಕಾರಿಯನ್ನು ಹಾಕಿ ಮಿಕ್ಸ್ ಮಾಡಿ, ದೋಸೆ ರೀತಿಯಲ್ಲಿ ತವಾದ ಮೇಲೆ ಹಾಕಿ ರೋಸ್ಟ್ ಮಾಡಿದರೆ ಸಿದ್ಧವಾಗಲಿದೆ ಹೆಲ್ತಿ ಮತ್ತು ಟೇಸ್ಟಿ ಗೋಧಿ ದೋಸೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss