Thursday, July 7, 2022

Latest Posts

ಸಂಜೆ ಸ್ನ್ಯಾಕ್ಸ್ ಗೆ ದಹೀ ಪುರಿ ಮಾಡುತ್ತೀರಾ? ಸಖತ್ ಟೇಸ್ಟಿ ರೆಸಿಪಿ ಇಲ್ಲಿದೆ ನೋಡಿ

ಸಂಜೆ ಹೊರಗೆ ಹೋಗಿ ಚಾಟ್ಸ್ ತಿನ್ನೋಕೆ ಆಗೋದಿಲ್ಲಾ ಅಂತ ಬೇಜಾರಾಗಬೇಡಿ. ಇಂದೆ ಮನೆಯಲ್ಲಿ ಮಾಡಿ ಮಕ್ಕಳ ಫೇವರೇಟ್ ದಹೀ ಪುರಿ. ಸಿಂಪಲ್ ರೆಸಿಪಿ ನಿಮಗಾಗಿ

ಬೇಕಾಗಿರುವ ಪದಾರ್ಥಗಳು:

ಪೂರಿ
ಕ್ಯಾರೆಟ್
ಟೊಮಾಟೋ
ಈರುಳ್ಳಿ
ಸೇವ್
ಸ್ವೀಟ್ ಪಾನಿ
ಮೊಸರು
ಉಪ್ಪು
ಸಕ್ಕರೆ
ಚಾಟ್ ಮಸಾಲಾ
ಚಿಲ್ಲಿ ಪೌಡರ್

ಮಾಡುವ ವಿಧಾನ:

  • ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ಸಕ್ಕರೆ, ಚಾಟ್ ಮಸಾಲಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
  • ನಂತರ ಪೂರಿ ತೆಗೆದುಕೊಂಡು ಅದರೊಳಗೆ ತುರಿದ ಕ್ಯಾರೆಟ್, ಹೆಚ್ಚಿದ ಈರುಳ್ಳಿ, ಟೊಮಾಟೋ ಹಾಕಿ
  • ನಂತರ ಅದಕ್ಕೆ ಸಿದ್ಧವಾಗಿರುವ ಮೊಸರು, ಸ್ವೀಟ್ ಪಾನಿ, ಚಾಟ್ ಮಸಾಲಾ, ಚಿಲ್ಲಿ ಪೌಡರ್, ಉಪ್ಪು, ಸೇವ್ ಹಾಕಿದರೆ ಸಖತ್ ಟೇಸ್ಟಿ ದಹೀ ಪುರಿ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss