ಸಾಮಾನ್ಯವಾಗಿ ಡೊಡ್ಡ ಪತ್ರೆ ಚಟ್ನಿ ಮಾಡೋದನ್ನ ಕೇಳಿದ್ದೀವಿ. ಆದರೆ ಅದರಲ್ಲೂ ರುಚಿಯಾದ ಅನ್ನ ತಯಾರಿಸಬಹುದು ಅಂತ ಗೊತ್ತಾ.. ಇಲ್ಲಿದೆ ನೋಡಿ ಸೂಪರ್ ರೆಸಿಪಿ
ಬೇಕಾಗುವ ಪದಾರ್ಥಗಳು:
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕಡಲೆಬೇಳೆ
ದೊಡ್ಡ ಪತ್ರೆ
ಉಪ್ಪು
ಅನ್ನ
ಕೊತ್ತಂಬರಿ
ಅರಿಶಿನ
ಹಸಿಮೆಣಸಿನಕಾಯಿ
ಅನ್ನ
ಮಾಡುವ ವಿಧಾನ:
- ಮೊದಲಿಗೆ ದೊಡ್ಡಪತ್ರೆಯನ್ನು ತೊಳೆದು ಅದನ್ನು ಪೇಸ್ಟ್ ಮಾಡಿಕೊಳ್ಳಿ.
- ನಂತರ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಹಸಿಮೆಣಸಿನಕಾಯಿ, ಅರಿಶಿನ ಹಾಗೂ ದೊಡ್ಡಪತ್ರೆ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ.
- ಕೊನೆಯಲ್ಲಿ ಅನ್ನಕ್ಕೆ ಉಪ್ಪು ಹಾಗೂ ದೊಡ್ಡಪತ್ರೆ ಪೇಸ್ಟ್ ಹಾಕಿ ಕಲಸಿ ಕೊನೆಯಲ್ಲಿ ಕೊತ್ತಂಬರಿ ಉದುರಿಸಿದರೆ ಸಿದ್ಧವಾಗುತ್ತೆ ಟೇಸ್ಟಿ ದೊಡ್ಡಪತ್ರೆ ರೈಸ್.