ಭಾನುವಾರ ಏನಾದರೂ ಟೇಸ್ಟಿಯಾದ ಡಿಶ್ ತಿನ್ನಬೇಕು ಅನ್ನಿಸೋದು ಸಹಜ. ಹೊರಗೆ ತಿಂದು ಆರೋಗ್ಯ ಹಾಳು ಮಾಡಿಕೊಳ್ಳೋದಕ್ಕಿಂತ ಮನೆಯಲ್ಲೇ ಮಾಡಿ ಸಂಡೇ ಸ್ಯಾಂಡ್ ವಿಚ್.. ಇಲ್ಲಿದೆ ಈಸಿ ರೆಸಿಪಿ
ಬೇಕಾಗಿರುವ ಪದಾರ್ಥಗಳು
ಕ್ಯಾರೆಟ್
ಈರುಳ್ಳಿ
ಕ್ಯಾಪ್ಸಿಕಂ
ಉಪ್ಪು
ಚಿಲ್ಲಿ ಪೌಡರ್
ಚಾಟ್ ಮಸಾಲಾ
ಮಯೋನೀಸ್
ಚೀಸ್
ಅರಿಶಿನ
ಕಡಲೆಹಿಟ್ಟು
ಗರಂ ಮಸಾಲಾ
ಜೀರಿಗೆ
ಕಾಳುಮೆಣಸಿನ ಪುಡಿ
ಬ್ರೆಡ್
ತುಪ್ಪ
ಮಾಡುವ ವಿಧಾನ
- ಮೊದಲಿಗೆ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ಅನ್ನು ತರಿ ತರಿಯಾದಗಿ ರುಬ್ಬಿಕೊಳ್ಳಿ.
- ನಂತರ ಅದಕ್ಕೆ ತುರಿದ ಚೀಸ್, ಮಯೋನೀಸ್, ಕಾಳುಮೆಣಸಿನ ಪುಡಿ, ಉಪ್ಪು, ಚಾಟ್ ಮಸಾಲಾ ಹಾಕಿ ಕಲಸಿ.
- ಮತ್ತೊಂದು ಪಾತ್ರೆಗೆ ಕಡಲೆಹಿಟ್ಟು, ಅಜ್ವಾನ್, ಅರಿಶಿನ, ಚಿಲ್ಲಿ ಪೌಡರ್, ಜೀರಿಗೆ, ಗರಂ ಮಸಾಲಾ, ಈರುಳ್ಳಿ, ಟೊಮಾಟೋ ಸ್ವಲ್ಪ ನೀರು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
- ನಂತರ ಇದನ್ನೆ ತವಾದ ಮೇಲೆ ದೋಸೆ ಹಿಟ್ಟಿನಂತೆ ಹಾಕಿ ಎರಡೂ ಬದಿ ರೋಸ್ಟ್ ಮಾಡಿ.
- ಈಗ ಬ್ರೆಡ್ ನ ಒಂದು ಬದಿಗೆ ಸಣ್ಣಗೆ ಹೆಚ್ಚಿದ ಟೊಮಾಟೋ, ಈರುಳ್ಳಿ, ಕ್ಯಾಪ್ಸಿಕಂ ನಿಂದ ಮಾಡಿದ ಮಿಕ್ಸ್ ಅನ್ನು ಹಾಕಿ ಅದರ ಮೇಲೆ ಒಂದು ಬ್ರೆಡ್ ಇಡಿ.
- ಬಳಿಕ ಆ ಬ್ರೆಡ್ ಮೇಲೆ ಸಿದ್ಧವಾಗಿರುವ ಕಡಲೆ ಹಿಟ್ಟಿನ ದೋಸೆ ಹಾಕಿ ಮತ್ತೊಂದು ಬ್ರೆಡ್ ನಿಂದ ಮುಚ್ಚಿ.
- ಕೊನೆಯಲ್ಲಿ ತುಪ್ಪದಿಂದ ಎರಡೂ ಬದಿಯನ್ನು ರೋಸ್ಟ್ ಮಾಡಿ ಸಣ್ಣದಾಗಿ ಕಟ್ ಮಾಡಿ ಕೊಟ್ಟರೆ ಸಿದ್ಧವಾಗಲಿದೆ ಸಂಡೇ ಸ್ಯಾಂಡ್ ವಿಚ್