Monday, August 15, 2022

Latest Posts

ಸಂಜೆ ಸ್ನಾಕ್ಸ್ ಗೆ ಮಾಡಿ ಈ ಸಿಂಪಲ್, ಕ್ರಿಸ್ಪಿ ಆಲೂ ವೆಜ್ ಕಟ್ಲೆಟ್.. ರೆಸಿಪಿ ನಿಮಗಾಗಿ

ಯಾವಾಗಲೂ ಚಪಾತಿ, ಪೂರಿ ತಿಂದು ಬೋರ್ ಆಗಿರುವ ಮಕ್ಕಳಿಗೆ ಮಾಡಿ ಕೊಡಿ ಈ ಟೇಸ್ಟಿ ಆಲೂ ವೆಜ್ ಕಟ್ಲೆಟ್.. ಸಿಂಪಲ್ ರೆಸಿಪಿ ಇಲ್ಲಿದೆ..

ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ
ಈರುಳ್ಳಿ
ಎಣ್ಣೆ
ಉಪ್ಪು
ರವೆ
ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಚಿಲ್ಲಿ ಪೌಡರ್
ಕೊತ್ತಂಬರಿ
ಚಾಟ್ ಮಸಾಲ
ಜೀರಿಗೆ
ಕಾರ್ನ್ ಫ್ಲೋರ್
ನೀರು

ಮಾಡುವ ವಿಧಾನ:

  • ಮೊದಲಿಗೆ ಆಲೂಗಡ್ಡೆ ಬೇಯಿಸಿಕೊಂಡು ಅದಕ್ಕೆ ಈರುಳ್ಳಿ, ಜೀರಿಗೆ, ಉಪ್ಪು, ಚಿಲ್ಲಿ ಪೌಡರ್, ಚಾಟ್ ಮಸಾಲಾ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ಅದನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಸ್ವಲ್ಪ ತೆಳ್ಳಗೆ ತಟ್ಟಿಕೊಳ್ಳಿ.
  • ನಂತರ ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ನೀರು, ಚಿಲ್ಲಿ ಪೌಡರ್, ಉಪ್ಪು ಹಾಕಿ ಮಿಕ್ಸ್ ಮಾಡಿ ಅದಕ್ಕೆ ಕಟ್ಲೆಟ್ ಅನ್ನು ಅದ್ದಿಕೊಳ್ಳಿ ಬಳಿಕ ಅದನ್ನು ರವೆಯಲ್ಲಿ ಹಾಕಿ.
  • ಕೊನೆಯಲ್ಲಿ ಅದನ್ನು ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಶಾಲೋ ಫ್ರೈ ಮಾಡಿದರೆ ಸಿದ್ಧವಾಗಲಿದೆ ಟೇಸ್ಟಿ ಕಟ್ಲೆಟ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss