ಪ್ರತಿದಿನ ಮಧ್ಯಾಹ್ನ ಊಟಕ್ಕೆ ಅನ್ನ ಸಾಂಬಾರ್ ತಿಂದು ಬೋರ್ ಆಗಿರುವಾಗ ಈ ರೀತಿಯ ಡಿಫರೆಂಟ್ ಆದ ಗೊಜ್ಜವಲಕ್ಕಿ ಟ್ರೈ ಮಾಡಿ ನೋಡಿ
ಬೇಕಾಗುವ ಪದಾರ್ಥಗಳು:
ಗಟ್ಟಿ ಅವಲಕ್ಕಿ
ಹುಣಸೆ ರಸ
ಉಪ್ಪು
ಮೆಣಸಿನಪುಡಿ(ದನಿಯಾ, ಮೆಂತೆ ಮಿಶ್ರಿತ)
ಕಡಲೆ ಬೀಜ
ಸಾಸಿವೆ
ಉದ್ದಿನಬೇಳೆ ಕಡಲೇಬೇಳೆ
ಕೊತ್ತಂಬರಿ
ಎಣ್ಣೆ
ಬೆಲ್ಲ
ತೆಂಗಿನ ತುರಿ
ಮಾಡುವ ವಿಧಾನ
- ಒಂದು ಪಾತ್ರೆಯಲ್ಲಿ ಹುಣಸೆ ರಸ ಮಾಡಿಕೊಳ್ಳಿ, ಅದಕ್ಕೆ ಬೆಲ್ಲದ ಪುಡಿ, ಮೆಣಸಿನಪುಡಿ, ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ಬಳಿಕ ಅದಕ್ಕೆ ಅಗತ್ಯವಿರುವಷ್ಟು ಗಟ್ಟಿ ಅವಲಕ್ಕಿ ಹಾಕಿ ನೆನಸಿಡಿ.
- ನಂತರ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಕಡಲೆಬೀಜ ಹಾಕಿ ಚೆನ್ನಾಗಿ ಉರಿದುಕೊಳ್ಳಿ.
- ಕೊನೆಯಲ್ಲಿ ಅದಕ್ಕೆ ನೆನಸಿಟ್ಟ ಅವಲಕ್ಕಿ, ಪುಡಿ ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಿ, ಬಿಸಿ ಮಾಡಿ ಕೊತ್ತಂಬರಿಯಿಂದ ಅಲಂಕರಿಸಿದರೆ ಅಲಂಕರಿದರೆ ಸಿದ್ಧವಾಗಲಿದೆ ಟೇಸ್ಟಿ ಗೊಜ್ಜವಲಕ್ಕಿ..