Thursday, August 18, 2022

Latest Posts

ಬಾಳೆಹಣ್ಣಿನಲ್ಲಿ ರುಚಿಯಾಗಿ ಮಾಡಿ ಪಾಯಸ: ಈಸಿ ರೆಸಿಪಿ ನಿಮಗಾಗಿ

ಹಬ್ಬದ ದಿನಗಳಲ್ಲಿ ದೇವರಿಗೆ ನೈವೇಧ್ಯ ಮಾಡಲು ತಂದಿರುವ ಬಾಳೆಹಣ್ಣು ಹೆಚ್ಚಾಗಿ ಉಳಿಯುವ ಸಾಧ್ಯತೆಗಳು ಇರುತ್ತದೆ. ಹಣ್ಣು ತುಂಬಾ ದಿನ ಉಳಿಯದ ಕಾರಣ ಬಾಳೆಹಣ್ಣಿನಲ್ಲಿ ಸಿಹಿ ಪಾಯಸ ಮಾಡಿ ಮನೆಯವರಿಗೆ ಕೊಡಿ.

ಬೇಕಾಗುವ ಸಾಮಾಗ್ರಿಗಳು:
ಬಾಳೆಹಣ್ಣು
ಬೆಲ್ಲ 1 ಕಪ್
ತೆಂಗಿನತುರಿ
ತುಪ್ಪ
ಏಲಕ್ಕಿ
ಗೋಡಂಬಿ
ದ್ರಾಕ್ಷಿ

ಮಾಡುವ ವಿಧಾನ:

ಮೊದಲಿಗೆ ಬಾಳೆಹಣ್ಣನ್ನು ಬೇಯಿಸಿಕೊಳ್ಳಬೇಕು.
ನಂತರ ಅದರಲ್ಲಿನ ಕಪ್ಪು ಬೀಜವನ್ನು ತೆಗೆದು ರುಬ್ಬಿಕೊಳ್ಳಬೇಕು.
ತೆಂಗಿನ ತುರಿಯಿಂದ ಹಾಲನ್ನು 2 ಪ್ರತ್ಯೇಕ ರೀತಿಯಲ್ಲಿ ತೆಗೆದಿಡಬೇಕು. ಮೊದಲಿಗೆ ಗಟ್ಟಿಹಾಲು, ಬಳಿಕ ರುಬ್ಬಿದಾಗ ಬರುವ ತೆಳು ಹಾಲನ್ನು ತೆಗೆದಿಡಬೇಕು.
ಒಂದು ಪಾತ್ರೆಗೆ ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಪಾಕ ಮಾಡಿಕೊಳ್ಳಬೇಕು.
ತೆಳು ಕೊಬ್ಬರಿ ಗಾಲು, 1 ಲೋಟ ಹಾಲು ಹಾಕಿ ½ ಲೋಟಕ್ಕೆ ಆಗುವಷ್ಟು ಕುದಿಸಬೇಕು. ಅದಕ್ಕೆ ರುಬ್ಬಿದ ಬಾಳೆಹಣ್ಣನ್ನು ಸೇರಿಸಬೇಕು. ಬಳಿಕ ಗಟ್ಟಿ ಹಾಲಿಗೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು.
ನಂತರ ತುಪ್ಪ, ಗೋಡಂಬಿ ದ್ರಾಕ್ಷಿ ಹುರಿದು ಪಾಯಸಕ್ಕೆ ಒಗ್ಗರಣೆ ಹಾಕಬೇಕು.

ಈಗ ರುಚಿ ರುಚಿಯಾದ ಬಾಳೆಹಣ್ಣು ಪಾಯಸ ಸವಿಯಲು ಸಿದ್ದ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!